ಬಸವೇಶ್ವರ ಪಿಯು ಕಾಲೇಜ್ ರಾಜ್ಯಮಟ್ಟಕ್ಕೆ ಆಯ್ಕೆ

ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಬಾಗಲಕೋಟೆ ನಗರದ ಬಸವೇಶ್ವರ ಪಿಯು ಕಲಾ ಮಹಾವಿದ್ಯಾಲಯದ ಪಿಯುಸಿ ವಿಭಾಗದ ವಿದ್ಯಾರ್ಥಿಗಳು. ಬಿವಿವಿ ಸಂಘದ ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಆಡಳಿತ ಅಧಿಕಾರಿಗಳಾದ ವಿ.ಆರ್. ಶಿರೋಳ, ಡಾ.ವಿ.ಎಸ್.ಕಟಗಿಹಳ್ಳಿಮಠ, ಪ್ರಾಚಾರ್ಯ ಎಸ್.ಆರ್.ಮೂಗನೂರಮಠ ಇದ್ದಾರೆ.

Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಮಟ್ಟದ ವಿಕಸಿತ ಭಾರತ
  • ನಶಾ ಮುಕ್ತ ಯುವ ಸ್ಪರ್ಧೆ

ಬಾಗಲಕೋಟೆ: ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ವತಿಯಿಂದ ಆಯೋಜಿಸಲಾದ ವಿಕಸಿತ ಭಾರತಕ್ಕಾಗಿ ನಶಾಮುಕ್ತ ಯುವ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಸವೇಶ್ವರ ಪಿಯು ಕಲಾ ಮಹಾವಿದ್ಯಾಲಯದ ಪಿಯುಸಿ ವಿಭಾಗದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಮೂಹ ಜಾನಪದ ಗೀತೆ ವಿಭಾಗದಲ್ಲಿ ಬಾಲಮ್ಮ ದಿಬ್ಬದಮನಿ ತಂಡ ಪ್ರಥಮ ಸ್ಥಾನ, ಸಮೂಹ ನೃತ್ಯ ವಿಭಾಗದಲ್ಲಿ ಪ್ರಯಾಂಕ ಇಟಗಿ ತಂಡ ಪ್ರಥಮ ಸ್ಥಾನ ಹಾಗೂ ರೀಲ್ಸ್ ಮೇಕಿಂಗ್ ವಿಭಾಗದಲ್ಲಿ ಸಂತೋಷ ಮಾದರ ತಂಡ ದ್ವಿತೀಯ ಸ್ಥಾನ ಪಡೆದು ವಿದ್ಯಾರ್ಥಿಗಳು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಜಿಲ್ಲಾಮಟ್ಟದಲ್ಲಿ ದಾಖಲಿಸಿದ ಈ ಸಾಧನೆಯ ಫಲವಾಗಿ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಜಿಲ್ಲೆಯ ಪ್ರತಿನಿಽಗಳಾಗಿ ಭಾಗವಹಿಸಲಿದ್ದಾರೆ.
ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಸಿ. ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಎನ್.ಅಥಣಿ, ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಆಡಳಿತ ಅಽಕಾರಿಗಳಾದ ವಿ.ಆರ್. ಶಿರೋಳ, ಡಾ.ವಿ.ಎಸ್.ಕಟಗಿಹಳ್ಳಿಮಠ, ಪ್ರಾಚಾರ್ಯ ಎಸ್.ಆರ್.ಮೂಗನೂರಮಠ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net