ಕೈಗಾರಿಕೆಗಳ ಅಭಿವೃದ್ಧಿಗೆ ಬ್ಯಾಂಕ್ ಸಹಕಾರ ಅಗತ್ಯ

 ಬಾಗಲಕೋಟೆ ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ‘ಎಂಎಸ್‌ಎಂಇ ಇಕೋ ಸಿಸ್ಟಂ ಅರಿಯಿರಿ’ ವಿಷಯ ಕುರಿತು ಕಾರ್ಯಾಗಾರವನ್ನು ಬಿವಿವಿ ಸಂಘದ ಆರ್‌ಸೆಟೆ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಅಂಗಡಿ ಉದ್ಘಾಟಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ, ನಿವತ್ತ ಎಂಎಸ್‌ಎಂಇ-ಡಿಎ್ಒ ಗೋಪಿನಾಥ ರಾವ್ ಮತ್ತಿತರರಿದ್ದರು.
ಬಾಗಲಕೋಟೆ ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ‘ಎಂಎಸ್‌ಎಂಇ ಇಕೋ ಸಿಸ್ಟಂ ಅರಿಯಿರಿ’ ವಿಷಯ ಕುರಿತು ಕಾರ್ಯಾಗಾರವನ್ನು ಬಿವಿವಿ ಸಂಘದ ಆರ್‌ಸೆಟೆ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಅಂಗಡಿ ಉದ್ಘಾಟಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ, ನಿವತ್ತ ಎಂಎಸ್‌ಎಂಇ-ಡಿಎ್ಒ ಗೋಪಿನಾಥ ರಾವ್ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಅಂಗಡಿ ಅಭಿಮತ
  • ಕಾರ್ಯಾಗಾರ ಉದ್ಘಾಟನೆ
  • ದೇಶದ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ ಕೈಗಾರಿಕೆಗಳ ಪಾತ್ರ ಮುಖ್ಯವಾಗಿದ್ದು
ಬಾಗಲಕೋಟೆ: ದೇಶದ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ ಕೈಗಾರಿಕೆಗಳ ಪಾತ್ರ ಮುಖ್ಯವಾಗಿದ್ದು, ಕೈಗಾರಿಕೆಗಳು ಬೆಳೆಯಲು ಬ್ಯಾಂಕ್‌ಗಳು ಸಹಕಾರ ನೀಡುವುದು ಅಗತ್ಯವಾಗಿದೆ ಎಂದು ಬಿವಿವಿ ಸಂಘದ ಆರ್‌ಸೆಟ್ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಅಂಗಡಿ ಹೇಳಿದರು.
ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕೆ ಕೇಂದ್ರ ಮತ್ತು ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಆ್ಯಂಡ್ ಅಡ್ವರ್ಟೈಸಿಂಗ್ ಲಿ. ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ರ‌್ಯಾಂಪ್ ಅಡಿ ‘ಎಂಎಸ್‌ಎಂಇ ಇಕೋ ಸಿಸ್ಟಂ ಅರಿಯಿರಿ’ ವಿಷಯದ ಕುರಿತು ಗುರುವಾರ ಬ್ಯಾಂಕರ್ಸ್‌ ಹಾಗೂ ವಿವಿಧ ಇಲಾಖಾ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೈಗಾರಿಕೆಗಳಲ್ಲಿ ಶಿಸ್ತು ಮತ್ತು ಬದ್ಧತೆ ತರಲು ಕೈಗಾರಿಕೆ ಅಭಿವೃದ್ಧಿ ರಾಂಪ್ ಯೋಜನೆ ಉದ್ಯಮಗಳಲ್ಲಿ ತ್ಯಾಜ್ಯ ನಿರ್ವಹಣೆ, ಇಂಧನ ದಕ್ಷತೆ ಮತ್ತು ಮರುಬಳಕೆ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಉತ್ತೇಜಿಸುತ್ತಿದ್ದು ಇಲಾಖಾ ಅಧಿಕಾರಿಗಳು ಪೂರಕವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ ಮಾತನಾಡಿ, ಉದ್ಯೋಗಿಗಳ ಆರೋಗ್ಯ ಮತ್ತು ಸುರಕ್ಷತೆ ರಾಂಪ್ ಯೋಜನೆಯ ಮತ್ತೊಂದು ಪ್ರಮುಖ ಅಂಶವಾಗಿದ್ದು ಕಾರ್ಮಿಕರಿಗೆ ಸುರಕ್ಷತೆ ಕೆಲಸದ ವಾತಾವರಣ, ಲಿಂಗ ಸಮಾನತೆ ಹಾಗೂ ನ್ಯಾಯಯುತ ವೇತನದಂತಹ ಸಾಮಾಜಿಕ ಅಂಶಗಳನ್ನು ಪಾಲಿಸುವುದು ಕೇವಲ ಕಾನೂನು ಬದ್ಧತೆಯಷ್ಟೆ ಅಲ್ಲ ಉದ್ಯಮಗಳ ಘನತೆಯನ್ನು ಹೆಚ್ಚಿಸುವ ಪ್ರಮುಖ ಅಂಶವಾಗಿದೆ.
ಸಾಂಪ್ರದಾಯಕ ಉದ್ಯಮಗಳು ಹಳೆಯ ಪದ್ಧತಿಯಿಂದ ಹೊರಬಂದು ಪರಿಸರಕ್ಕೆ ಹಾನಿಯಾಗದ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ರಾಂಪ್ ಯೋಜನೆ ಪರಿಣಾಮಕಾರಿ ವೇದಿಕೆ ಒದಗಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವತ್ತ ಎಂಎಸ್‌ಎಂಇ-ಡಿಎ್ಒ ಗೋಪಿನಾಥ ರಾವ್ ಸಂಪನ್ಮೂಲ ವ್ಯಕ್ತಿಯಾಗಿ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ಕೆಎಸ್​ಎಫ್​ಸಿ ಉಪವ್ಯವಸ್ಥಾಪಕ ಮಂಜುನಾಥ ಎಂ, ಕೆನರಾ ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ದಯಾನಂದ ಕಾಳಗಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಮಂಜುನಾಥ ಹೊಸಮನಿ ಹಾಗೂ ಸಹಾಯಕ ನಿರ್ದೇಶಕಿ ರತ್ನಾ ಅಂಗಡಿ ಸೇರಿದಂತೆ ವಿವಿಧ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net