ಅವಿಭಕ್ತ ಕುಟುಂಬದಲ್ಲಿ ಸಮತೋಲನ ಅಗತ್ಯ

ಬನಹಟ್ಟಿಯ ಜೇಡರ ದಾಸಿಮಯ್ಯ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಸಮಾರಂಭಕ್ಕೆ ಶಾಂತಾ ಸೊರಗಾಂವಿ ಚಾಲನೆ ನೀಡಿದರು. ಪೂರ್ಣಿಮಾ ಮೊಳೆಗಾಂವಿ, ಭಾಗ್ಯಶ್ರೀ ಮಾಂಗ ಇತರರಿದ್ದರು.
ಬನಹಟ್ಟಿಯ ಜೇಡರ ದಾಸಿಮಯ್ಯ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಸಮಾರಂಭಕ್ಕೆ ಶಾಂತಾ ಸೊರಗಾಂವಿ ಚಾಲನೆ ನೀಡಿದರು. ಪೂರ್ಣಿಮಾ ಮೊಳೆಗಾಂವಿ, ಭಾಗ್ಯಶ್ರೀ ಮಾಂಗ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಂತಾ ಸೊರಗಾಂವಿ ಹೇಳಿಕೆ
  • ಮಹಿಳಾ ದಿನಾಚರಣೆ ಪ್ರಯುಕ್ತ ಕಾರ್ಯಾಗಾರ
  • ಅವಿಭಕ್ತ ಕುಟುಂಬದ ಬದುಕು ಹೇಗೆ ಎಂಬ ವಿಷಯ ಕುರಿತು ಒಂದು ದಿನದ ಕಾರ್ಯಾಗಾರ
ರಬಕವಿ/ಬನಹಟ್ಟಿ: ತಾಯಂದಿರು ಮನೆಯ ನಿರ್ವಹಣೆ, ಪೋಷಕರ ಬಗ್ಗೆ ಮಹತ್ವದ ಮಾಹಿತಿ ಒದಗಿಸುವ ಮೂಲಕ ಅವಿಭಕ್ತ ಕುಟುಂಬದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಬಹು ಮುಖ್ಯ ಎಂದು ಮಹಿಳಾ ಮಂಡಳದ ಮುಖಂಡೆ ಶಾಂತಾ ಸೊರಗಾಂವಿ ಹೇಳಿದರು.
ಬನಹಟ್ಟಿಯ ಜೇಡರ ದಾಸಿಮಯ್ಯ ಸಮುದಾಯ ಭವನದಲ್ಲಿ ‘ಮಹಿಳಾ ದಿನಾಚರಣೆ’ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಅವಿಭಕ್ತ ಕುಟುಂಬದ ಬದುಕು ಹೇಗೆ ಎಂಬ ವಿಷಯ ಕುರಿತು ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಯಂದಿರು ದೇಶೀಯ ಸಂಸ್ಕ್ರತಿಯನ್ನು ಕುಟುಂಬದಲ್ಲಿ ಅಳವಡಿಸಿಕೊಳ್ಳುವುದರಿಂದ ಮುಂದಿನ ಪೀಳಿಗೆಗೆ ಸಾಗುತ್ತದೆ. ಮಹಿಳೆಯ ಸ್ವಾವಲಂಬಿ ಬದುಕಿನೊಂದಿಗೆ ಸ್ವಾಭಿಮಾನದ ಹೋರಾಟ ನಿರಂತರವಾಗಿರಬೇಕೆಂದು ಸೊರಗಾಂವಿ ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬಿದರು. ಮಹಿಳೆಯರಿಗಾಗಿ ಮನರಂಜನೆಗಾಗಿ ವಿಶೇಷ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ಹಟಗಾರ ಸಮಾಜದ ಜಿಲ್ಲಾಧ್ಯಕ್ಷ ಸೋಮನಾಥ ಗೊಂಬಿ ಅಧ್ಯಕ್ಷತೆ ವಹಿಸಿದ್ದರು. ಪೂರ್ಣಿಮಾ ಮೊಳೆಗಾಂವಿ, ರೇಖಾ ಮಂಡಿ, ಕಲ್ಪನಾ ಖಮಿತ್ಕರ, ಶಿವಾನಿ ಪೂಜಾರಿ, ಜ್ಯೋತಿ ಪತ್ತಾರ, ಶ್ರೀದೇವಿ ಕಾರಜೋಳ, ಮಾಲಾ ಬಾವಲತ್ತಿ, ಮಾಲಾ ಸರ್ವದೆ, ಸ್ಫೂರ್ತಿ ಹುಣಶ್ಯಾಳ, ಗೌರಿ ಬೆಳ್ಳಿವರಿ, ಸಂಗೀತಾ ಮೊಳೆಗಾಂವಿ, ದೀಪಾ ಸೊರಗಾಂವಿ, ಗೀತಾ ಗಾಯಕವಾಡ, ಶ್ಯಾಮಲಾ ಶೀಲವಂತ, ರೂಪಾಲಿ ಹಿರೇಮಠ, ಶಿವಾನಿ ಮಠದ, ಪ್ರೀತಿ ಪಾಟೀಲ, ಅಶ್ವಿನಿ ಮಾಂಗ, ಭಾಗ್ಯಶ್ರೀ ಮಂಡಿ ಸೇರಿ ಅನೇಕರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net