ಗಣತಿ ಕಾರ್ಯ ಪ್ರಗತಿ ಕುರಿತು ಗುರುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮನೆ ಮನೆ ಗಣತಿ ಕಾರ್ಯಕ್ಕೆ 3190 ಬ್ಲಾಕ್‌ಗಳನ್ನು ಮಾಡಲಾಗಿದೆ. ಪ್ರತಿಯೊಂದು ಬ್ಲಾಕ್‌ಗೆ ಓರ್ವ ಗಣತಿದಾರರು ಸೇರಿನ ಒಟ್ಟು 4212 ಗಣತಿದಾರರನ್ನು ನಿಯೋಜಿಸಲಾಗಿದೆ. 6 ಜನ ಗಣತಿದಾರರಿಗೆ ಓರ್ವ ಸುಪರ್ ವೈಜರ್‌ನಂತೆ ಒಟ್ಟು 776 ಸೂಪರ್ ವೈಜರಗಳನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ 4,40,602 ಮನೆಗಳಿದ್ದು, ಪ್ರತಿಯೊಂದು ಮನೆಗಳಿಗೆ ತೆರಳಿ ಗಣತಿದಾರರು ಮನೆಯ ಸ್ಥಿತಿಗತಿ, ಮೂಲಸೌಕರ್ಯ ಸೇರಿ ಇತರೆ ಮಾಹಿತಿ ಕಲೆ ಹಾಕಲಿದ್ದಾರೆ ಎಂದರು.