ಪ್ಲಾಸ್ಟಿಕ್ ತ್ಯಜಿಸಿ ಪ್ರಕೃತಿ ರಕ್ಷಿಸಿ

ಮಹಾಲಿಂಗಪುರ ನಗರದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳು ಸ್ವಚ್ಛ ಪರಿಸರದ ಅಗತ್ಯತೆ ಸಾರುವ ಫಲಕಗಳನ್ನು ಹಿಡಿದು ಜಾಗೃತಿ ಮೂಡಿಸಿದರು. ಚಂದ್ರಶೇಖರ ಉಪ್ಪಾರ, ಶಿವಲಿಂಗ ಟಿರಕಿ ಇತರರಿದ್ದರು.
ಮಹಾಲಿಂಗಪುರ ನಗರದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳು ಸ್ವಚ್ಛ ಪರಿಸರದ ಅಗತ್ಯತೆ ಸಾರುವ ಫಲಕಗಳನ್ನು ಹಿಡಿದು ಜಾಗೃತಿ ಮೂಡಿಸಿದರು. ಚಂದ್ರಶೇಖರ ಉಪ್ಪಾರ, ಶಿವಲಿಂಗ ಟಿರಕಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚಂದ್ರಶೇಖರ ಉಪ್ಪಾರ ಹೇಳಿಕೆ
  • ವಿದ್ಯಾರ್ಥಿಗಳ ಜಾಗೃತಿ ಅಭಿಯಾನ
ಮಹಾಲಿಂಗಪುರ: ಪರಿಸರ ಸಂರಕ್ಷಣೆ ಕಾರ್ಯ ಅಗತ್ಯವಾಗಿದ್ದು, ಅರಣ್ಯ ಸಂಪತ್ತಿನ ಉಳಿವಿನಿಂದಲೆ ಪರಿಸರ ಸಮತೋಲನ ಕಾಪಾಡಲು ಸಾಧ್ಯ ಎಂದು ಅರಣ್ಯ ಇಲಾಖೆ ಮುಧೋಳ ವಲಯದ ಅರಣ್ಯ ಪಾಲಕ ಚಂದ್ರಶೇಖರ ಉಪ್ಪಾರ ಹೇಳಿದರು.
ನಗರದ ವೆಂಕಟೇಶ್ ಹಾಸ್ಪಿಟಲ್, ವಿ.ಪಿ. ಕನಕರೆಡ್ಡಿ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್ ಹಾಗೂ ಢಪಳಾಪುರ ವಿದ್ಯಾ ವಿಹಾರ ಸಿಬಿಎಸ್‌ಇ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅರಣ್ಯ ನಾಶ, ಪ್ಲಾಸ್ಟಿಕ್ ಬಳಕೆ ಹಾಗೂ ಮಾಲಿನ್ಯದಿಂದ ಪ್ರಕೃತಿಗೆ ಅಪಾಯ ಹೆಚ್ಚು. ಪ್ರತಿಯೊಬ್ಬ ನಾಗರಿಕರು ಪರಿಸರ ರಕ್ಷಣೆಗೆ ಕೈ ಜೋಡಿಸಬೇಕು. ಪ್ರತಿಯೊಬ್ಬರೂ ವರ್ಷಕ್ಕೆ ಕನಿಷ್ಠ ಒಂದು ಸಸಿ ನೆಟ್ಟು ಅದರ ಪೋಷಣೆ ಮಾಡುವ ಸಂಕಲ್ಪ ಮಾಡಬೇಕು. ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿ ಅಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.
ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ, ಪರಿಸರ ಸಮತೋಲನ ಕಾಪಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ಪ್ರಕೃತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ, ಜಯರಾಮ ಶೆಟ್ಟಿ ಮಾತನಾಡಿದರು.
ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ, ಮರಗಳ ಮಹತ್ವ, ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮಗಳು ಹಾಗೂ ಸ್ವಚ್ಛ ಪರಿಸರದ ಅಗತ್ಯತೆ ಸಾರುವ ಫಲಕಗಳನ್ನು ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಜಾಥಾ ಮೂಲಕ ಮರ ನೆಡಿ ಪರಿಸರ ಉಳಿಸಿ, ಪ್ಲಾಸ್ಟಿಕ್ ತ್ಯಜಿಸಿ ಪ್ರಕೃತಿ ರಕ್ಷಿಸಿ ಎಂಬ ಘೋಷಣೆ ಕೂಗಿದರು.
ಚಂದ್ರಶೇಖರ ಉಪ್ಪಾರ, ಶಿವಲಿಂಗ ಟಿರಕಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net