ಬಾದಾಮಿ ನಗರದ ಗ್ರಾಮ ದೇವತಾ ಉಡಿ ತುಂಬುವ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಮತ್ತು ಕಲಾವಿದರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ತಿಪ್ಪಣ್ಣ ನೀಲಗುಂದ, ಶಂಕ್ರಪ್ಪ ಗಾಣಿಗೇರ, ಮುತ್ತಪ್ಪ ವಾಲಿಕಾರ, ಕರಿಯಪ್ಪ ಜೂಲಕಟ್ಟಿ, ಲಕ್ಷ್ಮಣ ತಳವಾರ ಇತರರಿದ್ದರು.
ಬಾದಾಮಿ: ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಹೇಳಿದರು.
ನಗರದ ಗ್ರಾಮ ದೇವತಾ ಉಡಿ ತುಂಬುವ ಕಾರ್ಯಕ್ರಮದ ನಿಮಿತ್ತ ಬುಧವಾರ ರಾತ್ರಿ ಪಾಂಡುರಂಗ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಯಾಕವ್ವ ಗರತಿ ನನ್ಮಾಕ ಮರತಿ ಎಂದು ಸಾಮಾಜಿಕ ನಾಟಕ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಭಾವಂತರಿಗೆ ಪ್ರೋತ್ಸಾಹದ ಅಗತ್ಯವಿದೆ. ಜಾಗತಿಕರಣ ಪರಿಣಾಮ ಅವಕಾಶಗಳು ವಿಪುಲವಾಗಿವೆ ಎಂದರು.
ಮುಖಂಡ ಅಶೋಕ ಕೋಟನಕರ ಮಾತನಾಡಿ, ಕಲೆ, ಸಾಹಿತ್ಯ, ಸಂಗೀತ ಇದ್ದಾಗ ನಾಡು ಸಮೃದ್ಧವಾಗಿರುತ್ತದೆ. ಬಾದಾಮಿ ಕಲೆಗಳ ತವರೂರು ಎಂದರು.