ಪರಿಸರ ರಕ್ಷಣೆಗೆ ಜಲಚರಗಳ ಕೊಡುಗೆ ಅಪಾರ

ಬಾಗಲಕೋಟೆಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವ ಮೊಸಳೆ ದಿನಾಚರಣೆಯಲ್ಲಿ ಪರಿಸರ ಪ್ರಶಸ್ತಿ ಪುರಸ್ಕೃತ ಡಾ.ಎಂ.ಆರ್.ದೇಸಾಯಿ ಮಾತನಾಡಿದರು. ಡಿಎಫ್‌ಒ ಕೆ.ಎಸ್ ಗೊರವರ್, ಸಹಾಯಕ ಅರಣ್ಯ ಸಂರಕ್ಷಣಾಽಕಾರಿ ರೂಪ ವಿ.ಕೆ ಇತರರಿದ್ದರು.
ಬಾಗಲಕೋಟೆಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವ ಮೊಸಳೆ ದಿನಾಚರಣೆಯಲ್ಲಿ ಪರಿಸರ ಪ್ರಶಸ್ತಿ ಪುರಸ್ಕೃತ ಡಾ.ಎಂ.ಆರ್.ದೇಸಾಯಿ ಮಾತನಾಡಿದರು. ಡಿಎಫ್‌ಒ ಕೆ.ಎಸ್ ಗೊರವರ್, ಸಹಾಯಕ ಅರಣ್ಯ ಸಂರಕ್ಷಣಾಽಕಾರಿ ರೂಪ ವಿ.ಕೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಎಂ.ಆರ್.ದೇಸಾಯಿ ಅಭಿಮತ
  • ವಿಶ್ವ ಮೊಸಳೆ ದಿನಾಚರಣೆ
ಬಾಗಲಕೋಟೆ: ಪರಿಸರ ರಕ್ಷಣೆಗೆ ಮೊಸಳೆ ಸೇರಿ ಅನೇಕ ಜಲಚರಗಳ ಕೊಡುಗೆ ಅಪಾರವಾಗಿದೆ ಎಂದು ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಡಾ. ಎಂ.ಆರ್ ದೇಸಾಯಿ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಅರಣ್ಯ ಇಲಾಖೆ ಹಾಗೂ ಪ್ರಾದೇಶಿಕ ಅರಣ್ಯ ವಿಭಾಗದಿಂದ ಆಯೋಜಿಸಿದ್ದ ವಿಶ್ವ ಮೊಸಳೆ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಭೂಮಿಯ ಮೇಲೆ ಮಾನವನಿಗಿಂತ ಸಾವಿರಾರು ವರ್ಷಗಳ ಹಿಂದೆ ಮೊಸಳೆಗಳು ಇದ್ದು, ಅವು ನೀರಿನ ಕಲ್ಮಶ ನಾಶ ಮಾಡಿ ಶುದ್ಧ ನೀರು ಕೊಡುವುದಲ್ಲದೇ ಅವುಗಳು ಹೊರ ಹಾಕಿದ ಕಲ್ಮಶದಿಂದ ಮೀನುಗಳು ಬದುಕುತ್ತವೆ. ಮೊಸಳೆಗಳು ಹೆಚ್ಚಾಗಿ ಸಿಹಿ ನೀರಿನಲ್ಲಿ ವಾಸವಾಗಿರುತ್ತವೆ. ಮಾನವ ಹಾಗೂ ಪ್ರಾಣಿಗಳ ಸಂಘರ್ಷ ನಿಲ್ಲಬೇಕು, ಅಂದಾಗ ಮೊಸಳೆಗಳು ಮುಂದಿನ ಪೀಳಿಗೆಗೆ ನೋಡಲು ಸಿಗುತ್ತವೆ. ಇಲ್ಲವಾದಲ್ಲಿ ಕೇವಲ ಚಿತ್ರದಲ್ಲಿ ಅವುಗಳನ್ನು ನೋಡುವ ಕಾಲ ಬಂದರೂ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಡಿಎಫ್‌ಒ ಕೆ.ಎಸ್ ಗೊರವರ್ ಮಾತನಾಡಿ, ಇಂದು ಮೊಸಳೆಗಳ ರಕ್ಷಣೆ ಅವಶ್ಯವಾಗಿದ್ದು, ನದಿ, ಕೆರೆ ನೀರು ಬತ್ತಿದಾಗ ಹೊರ ಬರುವ ಮೊಸಳೆಗಳನ್ನು ಕಳ್ಳರು ಬೇಟೆಯಾಡುತ್ತಿದ್ದಾರೆ. ಕಾರಣ ಮೊಸಳೆಯ ಚರ್ಮ್ಮಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ಇಂತಹ ದುಷ್ಕೃತ್ಯಗಳು ನಡೆಯುತ್ತಿದ್ದು, ಅವುಗಳನ್ನು ತಡೆಯುವ ಕಾರ್ಯವಾಗಬೇಕಿದೆ ಎಂದು ತಿಳಿಸಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೂಪ ವಿ.ಕೆ ಮಾತನಾಡಿ , ಪರಿಸರ ರಕ್ಷಣೆ, ಕಾಡು ಪ್ರಾಣಿಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಶಾಲಾ ಮಕ್ಕಳು ಪ್ರತಿಯೊಬ್ಬರು ಒಂದು ಮರವನ್ನು ನೆಟ್ಟು ಶಾಲೆಗೆ ಬರುವಾಗ ಒಂದು ಚೆಂಬು ನೀರು ಹಾಕಿದರೆ ಸಾಕು ತನ್ನಿಂದ ತಾನೇ ಮರ ಬೆಳೆದು ಪರಿಸರಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಪರಿಸರ ಕುರಿತಾದ ಪ್ರಬಂಧ ಹಾಗೂ ಚಿತ್ರಕಲೆಯಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಯಿತು. ಮೊಸಳೆ ರಕ್ಷಕರಿಗೆ ಹಾಗೂ ಹಾವು ರಕ್ಷಕರಿಗೂ ಸತ್ಕಾರ ಮಾಡಲಾಯಿತು. ವಲಯ ಅರಣ್ಯ ಸಂರಕ್ಷಣಾಧಿಕಾರಿ ಮಹಾಂತೇಶ ಸಜ್ಜನ್ ಸ್ವಾಗತಿಸಿದರು. ಹುನಗುಂದ ಆರ್‌ಫ್‌ಒ ಜಯವರ್ಧನ ತಳವಾರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net