ಗುಳೇದಗುಡ್ಡದಲ್ಲಿ ವಿದ್ಯುತ್ ವಲಯ ಖಾಸಗೀಕರಣ ಮಾಡದಂತೆ ಆಗ್ರಹಿಸಿ ಕರ್ನಾಟಕ ರೈತ ವಿಕಾಸ ಸಂಘ ಉಪ ತಹಸೀಲ್ದಾರ್ ಮುನ್ನಾ ರಜಪೂತ ಅವರಿಗೆ ಮನವಿ ಸಲ್ಲಿಸಲಾಯಿತು. ಜಹಿರಾಬಿ ನದ್ಾ, ಸಲಹಾ ಸಮಿತಿ ಅಧ್ಯಕ್ಷ ಚಂದಪ್ಪ ಗೌಡರ, ಹನಮಂತ ಜಗಿಯವರ, ಶೇಖರ ಚವಾಣ್, ರಂಗಪ್ಪ ನಾಗರಾಳ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸರ್ಕಾರ ವಿದ್ಯುತ್ ವಲಯ ಖಾಸಗೀಕರಣಗೊಳಿಸಲು ಮುಂದಾಗುತ್ತಿರುವುದು ರೈತರ ಬದುಕಿಗೆ ಇನ್ನಷ್ಟು ಸಂಕಷ್ಟ
ವಿದ್ಯುತ್ ಖಾಸಗೀಕರಣ ಸರ್ಕಾರ ಕೂಡಲೇ ಕೈಬಿಡಬೇಕು
ಸರ್ಕಾರ ವಿದ್ಯುತ್ ವಲಯವನ್ನು ಖಾಸಗೀಕರಣಗೊಳಿಸುವುದರಿಂದ ಸರ್ಕಾರದ ಯೋಜನೆಗಳು ರೈತರಿಗೆ ದೊರೆಯುವುದಿಲ್ಲ
ಗುಳೇದಗುಡ್ಡ : ಸರ್ಕಾರ ವಿದ್ಯುತ್ ವಲಯ ಖಾಸಗೀಕರಣಗೊಳಿಸಲು ಮುಂದಾಗುತ್ತಿರುವುದು ರೈತರ ಬದುಕಿಗೆ ಇನ್ನಷ್ಟು ಸಂಕಷ್ಟ ತರಲಿದ್ದು, ವಿದ್ಯುತ್ ಖಾಸಗೀಕರಣ ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ವಿಕಾಸ ಸಂಘ ಶುಕ್ರವಾರ ಉಪ ತಹಸೀಲ್ದಾರ್ ಮುನ್ನಾ ರಜಪೂತಗೆ ಮನವಿ ಸಲ್ಲಿಸಲಾಯಿತು.
ಸರ್ಕಾರ ವಿದ್ಯುತ್ ವಲಯವನ್ನು ಖಾಸಗೀಕರಣಗೊಳಿಸುವುದರಿಂದ ಸರ್ಕಾರದ ಯೋಜನೆಗಳು ರೈತರಿಗೆ ದೊರೆಯುವುದಿಲ್ಲ. ಕೃಷಿ ಪಂಪ್ ಸೆಟ್ ಹಾಗೂ ಗ್ರಾಮೀಣ ಭಾಗದ ಜನರಿಗೆ ವಿದ್ಯುತ್ ದರ ದುಬಾರಿಯಾಗಬಹುದು. ಇದರಿಂದ ರೈತನ ಮೇಲೆ ಪ್ರಹಾರ ಮಾಡಿದಂತಾಗುತ್ತದೆ. ಆದ್ದರಿಂದ ಸರ್ಕಾರ ಖಾಸಗೀಕರಣಗೊಳಿಸುವುದನ್ನು ತಕ್ಷಣ ಕೈಬಿಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮಹಿಳಾ ಅಧ್ಯಕ್ಷೆ ಜಹಿರಾಬಿ ನದಾಫ್ ಸಲಹಾ ಸಮಿತಿ ಅಧ್ಯಕ್ಷ ಚಂದಪ್ಪ ಗೌಡರ, ಹನಮಂತ ಜಗಿಯವರ, ಶೇಖರ ಚವಾಣ್, ರಂಗಪ್ಪ ನಾಗರಾಳ, ಮಲ್ಲಪ್ಪ ದೇಶಾಲರ, ರಾಚಯ್ಯ ಸರಗಣಾಚಾರಿ, ಮಹಿಬೂಬ ವಾಲೀಕಾರ, ಶಿವಪ್ಪ ಶ್ಯಾವಿ, ಮಹಾಂತೇಶ ಮಾದರ, ಉಮ್ಮಯ್ಯ ಹಿರೇಮಠ ಇತರರಿದ್ದರು.