ಅಂಗನವಾಡಿಗಳು ಶಿಕ್ಷಣದ ಮೊದಲ ಮೆಟ್ಟಿಲು

ಗುಳೇದಗುಡ್ಡದ ಅಂಗನವಾಡಿ ಕಾರ್ಯಕರ್ತೆ ಪಾರ್ವತಿ ಶೆಟ್ಟರ ಅವರನ್ನು ಸನ್ಮಾನಿಸಲಾಯಿತು. ಮುಖಂಡ ಹೊಳಬಸು ಶೆಟ್ಟರ, ಅಂಗನವಾಡಿ ಮೇಲ್ವಿಚಾರಕಿ ಬಿ.ಎಸ್. ಬರಹಾನಪುರ, ದ್ರಾಕ್ಷಾಯಣಿ ಯಂಡಿಗೇರಿ, ರತ್ನಮಾಲ ಬಿಂಜವಾಡಗಿ, ಸೌಮ್ಯ ನಂದಿಕೋಲಮಠ, ಗಿರಿಜಾ ಕಿರಸೂರಮಠ, ವಾಣಿಶ್ರೀ ಶೆಟ್ಟರ ಇದ್ದರು.
ಗುಳೇದಗುಡ್ಡದ ಅಂಗನವಾಡಿ ಕಾರ್ಯಕರ್ತೆ ಪಾರ್ವತಿ ಶೆಟ್ಟರ ಅವರನ್ನು ಸನ್ಮಾನಿಸಲಾಯಿತು. ಮುಖಂಡ ಹೊಳಬಸು ಶೆಟ್ಟರ, ಅಂಗನವಾಡಿ ಮೇಲ್ವಿಚಾರಕಿ ಬಿ.ಎಸ್. ಬರಹಾನಪುರ, ದ್ರಾಕ್ಷಾಯಣಿ ಯಂಡಿಗೇರಿ, ರತ್ನಮಾಲ ಬಿಂಜವಾಡಗಿ, ಸೌಮ್ಯ ನಂದಿಕೋಲಮಠ, ಗಿರಿಜಾ ಕಿರಸೂರಮಠ, ವಾಣಿಶ್ರೀ ಶೆಟ್ಟರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಸ್ಥಾಪಕ ಅಧ್ಯಕ್ಷ ಹೊಳಬಸು ಶೆಟ್ಟರ ಅಭಿಮತ
  • ಮಕ್ಕಳ ಆರೋಗ್ಯ, ಶಿಕ್ಷಣದ ರೂವಾರಿಗಳು
  • ಬೀಳ್ಕೊಡುಗೆ ಸಮಾರಂಭ
ಗುಳೇದಗುಡ್ಡ: ಅಂಗನವಾಡಿಗಳು ಶಿಕ್ಷಣದ ಮೊದಲ ಮೆಟ್ಟಲಾಗಿದ್ದು, ಇಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಮಗುವಿನಲ್ಲಿ ಕಲಿಕೆಯ ಆಸಕ್ತಿ ಮೂಡಿಸಲು ಅತ್ಯಂತ ಶ್ರದ್ಧೆ, ಆಸಕ್ತಿಯಿಂದ ಕಾರ್ಯ ನಿರ್ವಹಿಸುತ್ತಾರೆ ಎಂದು ಹೊಳೆ ಹುಚ್ಚೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹೊಳಬಸು ಶೆಟ್ಟರ ಹೇಳಿದರು.
ಪಟ್ಟಣದ ಕಿರಸೂರಮಠದ ಆವರಣದಲ್ಲಿನ ಅಂಗನವಾಡಿ ಕೇಂದ್ರ ನಂ. 4ರ ಅಂಗನವಾಡಿ ಕಾರ್ಯಕರ್ತೆ ಪಾರ್ವತಿ ಶೆಟ್ಟರ ಅವರು ನಿವೃತ್ತಿ ಹಿನ್ನೆಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತೆಯಾಗಿ ಅಂದಾಜು 28 ವರ್ಷಗಳಿಂದ ಕಾರ್ಯನಿರ್ವಹಿಸಿ ಈಗ ನಿವೃತ್ತಿಯಾಗಿರುವ ಪಾರ್ವತಿ ಶೆಟ್ಟರ ಅವರು ಅಂಗನವಾಡಿ ಮಕ್ಕಳಿಗೆ ತಾಯಿಯಂತೆ ಕಾರ್ಯನಿರ್ವಹಿಸಿದರು. ಮಕ್ಕಳಿಗೆ ಅಕ್ಷರ ಕಲಿಕೆಯಿಂದ ಹಿಡಿದು ಅವರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಬಹಳಷ್ಟ ಮಹತ್ವ ಪಡೆದುಕೊಂಡಿದೆ. ಅಲ್ಲದೆ ಸರ್ಕಾರದ ಯೋಜನೆಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದರು.
ಅಂಗನವಾಡಿ ಮೇಲ್ವಿಚಾರಕಿ ಬಿ.ಎಸ್. ಬರಹಾನಪುರ, ದ್ರಾಕ್ಷಾಯಣಿ ಯಂಡಿಗೇರಿ, ರತ್ನಮಾಲ ಬಿಂಜವಾಡಗಿ, ಸೌಮ್ಯ ನಂದಿಕೋಲಮಠ, ಗಿರಿಜಾ ಕಿರಸೂರಮಠ, ವಾಣಿಶ್ರೀ ಶೆಟ್ಟರ, ಶ್ರೀಧರ ಶೆಟ್ಟರ, ರಾಜು ಶೆಟ್ಟರ, ಪಲ್ಲವಿ ಕಂಚ್ಯಾಣಿ, ಪ್ರದೀಪ ಕಂಚ್ಯಾಣಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net