ಪ್ರಾಚಾರ್ಯ ಎಸ್.ಆರ್. ಮೂಗನೂರಮಠ ಮಾತನಾಡಿ, ಫೋಟೋಗ್ರಫಿಯು ನೆರಳು-ಬೆಳಕುಗಳ ಜೊತೆಯಾಟವಾಗಿದ್ದು ಅದನ್ನು ಸಮರ್ಪಕವಾಗಿ ಬಳಸುವುದನ್ನು ಕಲಿತವರು ಉತ್ತಮ ಛಾಯಾಗ್ರಾಹಕರಾಗುತ್ತಾರೆ. ಫೋಟೋಗ್ರಾರ್ ಆದವನಿಗೆ ಕಲ್ಪನಾ ಶಕ್ತಿ ಇದ್ದರೆ ಆಕರ್ಷಕ ಚಿತ್ರಗಳನ್ನು ಸೆರೆ ಹಿಡಿಯಬಹುದು. ಇತ್ತೀಚಿನ ದಿನಗಳಲ್ಲಿ ಫೋಟೋಗ್ರಫಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಚಿತ್ರದಲ್ಲಿನ ಲೋಪದೋಷಗಳನ್ನು ತಕ್ಷಣವೇ ತಿದ್ದಿಕೊಳ್ಳಲು ಅವಕಾಶವಿದೆ. ಕ್ಯಾಮರಾ ಸೆಟ್ಟಿಂಗ್ಸ್ ಗಳನ್ನು ಸರಿಯಾಗಿ ಕಲಿತುಕೊಳ್ಳಿ. ಲೆನ್ಸ್ ಬಳಕೆಯ ಕೌಶಲ ಬೆಳೆಸಿಕೊಳ್ಳಿ ಮತ್ತು ಫಿಲ್ಟರ್ ಗಳ ಬಳಕೆಯಿಂದ ಉತ್ತಮ ಚಿತ್ರಗಳನ್ನು ತೆಗೆಯಲು ಸಹಾಯಕವಾಗಿದ್ದು ಫೋಟೋಗಳು ಭಾವನೆಗಳನ್ನು ವ್ಯಕ್ತಪಡಿಸುವ ಸಾಧನಗಳಾಗಿವೆ ಎಂದು ತಿಳಿಸಿದರು.