ಕಾಂಗ್ರೆಸ್ ವಿರುದ್ಧ ಗೂಂಡಾಗಿರಿ ಆರೋಪ

ಕಾಂಗ್ರೆಸ್ ಗೂಂಡಾಗಿರಿ ನಡೆಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ವಿರುದ್ಧ ಶುಕ್ರವಾರ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲಾಡಳಿತ ಭವನದ ಒಳಗೆ ಹೋಗದಂತೆ ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್ ಹಾಕಿ ಬಂದ್ ಮಾಡಿ, ಬಿಗಿಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಕಾಂಗ್ರೆಸ್ ಗೂಂಡಾಗಿರಿ ನಡೆಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ವಿರುದ್ಧ ಶುಕ್ರವಾರ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲಾಡಳಿತ ಭವನದ ಒಳಗೆ ಹೋಗದಂತೆ ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್ ಹಾಕಿ ಬಂದ್ ಮಾಡಿ, ಬಿಗಿಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
Published on
ಬಾಗಲಕೋಟೆ: ಕಾಂಗ್ರೆಸ್ ಪಕ್ಷ ಗೂಂಡಾಗಿರಿ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿ, ಅದರ ವಿರುದ್ಧ ನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಕಾರ್ಯಕತ್ರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನವನಗರದ ಜಿಲ್ಲಾ ಬಿಜೆಪಿ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ನವನಗರದ ಪ್ರಮುಖ ರಸ್ತೆಗಳ ಮುಖಾಂತರ ಜಿಲ್ಲಾಡಳಿತದ ವರೆಗೂ ಸಾಗಿ ಬಂದಿತು. ಮಾರ್ಗದುದ್ದಕ್ಕೂ ಗೂಂಡಾ ಕಾಂಗ್ರೆಸ್‌ಗೆ ಽಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಭವನದ ಪ್ರವೇಶ ದ್ವಾರಕ್ಕೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದರಿಂದ ಪ್ರವೇಶ ದ್ವಾರದ ಎದುರುಗಡೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು, ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನಾ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ವೀರಣ್ಣ ಚರಂತಿಮಠ, ರಾಹುಲ್ ಗಾಂಽ, ಕಾಂಗ್ರೆಸ್ ಪಕ್ಷ ಮತ್ತು ಕಾಕ್ರೋಚ್ ಪಾರ್ಟಿ ವಿರುದ್ಧ ಹರಿಹಾಯ್ದರು. ಲಡಾಖ್‌ನಿಂದ ದೆಹಲಿಗೆ ಬಂದು ಶಾಂತಯುತ ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹ ನಡೆಸಿಲು ಬಂದಿದ್ದ ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ವೇದಿಕೆಯನ್ನು ಜಿರಳಿ ಪಾರ್ಟಿ ಮತ್ತು ಕಾಂಗ್ರೆಸ್ ಪಕ್ಷ ದುರ್ಬಳಿಕೆ ಮಾಡಿಕೊಳ್ಳಲು ಯತ್ನಿಸಿವೆ. ಹೋರಾಟದ ಸ್ಥಳಕ್ಕೆ ಕಾಂಗ್ರೆಸ್ ತನ್ನ ಗೂಂಡಾಗಳನ್ನು ಕೂಡಿಸಿಕೊಂಡು ರಾದ್ಧಾಂತ ಸೃಷ್ಟಿಸಲು ಮುಂದಾಗಿದೆ ಎಂದರು.
ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಕಾಂಗ್ರೆಸ್ ಬಗ್ಗೆ ಮತ್ತು ರಾಹುಲ್ ವಿರುದ್ಧ ಸ್ವತಃ ವಾಂಗ್ಚುಕ್ ಅವರ ಪತ್ನಿಯೇ ಪ್ರಕಟನೆ ನೀಡಿದ್ದು, ಇದು ನಮ್ಮ ಪ್ರತಿಭಟನೆಯಲ್ಲ, ಹೊರಗಿನಿಂದ ಗೂಂಡಾಗಳನ್ನು ಕರೆತರಲಾಗಿದೆ. ಹೀಗಾಗಿ ಪ್ರತಿಭಟನೆಯನ್ನು ನಾವು ಇಲ್ಲಿಗೆ ಮುಕ್ತಾಯಗೊಳಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.
ಪ್ರತಿಭಟನೆ ಹಾಗೂ ನಂತರ ಸುದ್ದಿಗಾರರ ಜೊತೆ ಮಾತನಾಡಿ ಮಾಜಿ ಸಚಿವ ಮುರುಗೇಶ ನಿರಾಣಿ, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುವ ನೈತಿಕತೆ ರಾಹುಲ್ ಗಾಂಽ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಮೋದಿ ಎಲ್ಲಿ, ರಾಹುಲ್ ಎಲ್ಲಿ ಎಂದು ಪ್ರಶ್ನಿಸಿದರು.
ದೇಶದ ಹೆಸರನ್ನು ಮೋದಿ ಅವರು ಆಕಾಶದೆತ್ತರಕ್ಕೆ ತೆಗೆದುಕೊಂಡು ಹೋಗುತ್ತಿರುವಾಗ ಅದನ್ನು ಡೌನ್ ಮಾಡಬೇಕು ಎನ್ನುವ ಶಡ್ಯಂತ ವಿರೋಧ ಪಕ್ಷಗಳಿಂದ ನಡೆದಿದೆ ಎಂದು ಆರೋಪಿಸಿದರು. ಈಗ ಪಾರ್ಲಿಮೆಂಟ್ ನಡೆದಿದೆ. ಅಲ್ಲಿ ಚರ್ಚಿಸಲು ಕಾಂಗ್ರೆಸ್ ಪಕ್ಷದ ಬಳಿ ವಿಷಯಗಳೇ ಇಲ್ಲ. ಹೀಗಾಗಿ ಒಂದು ಸಣ್ಣ ವಿಷಯ ತೆಗೆದುಕೊಂಡು ಹೋರಾಟ ಎನ್ನುತ್ತಿದ್ದಾರೆ. ಆದರೆ, ಅವರಕ್ಕಿಂತ ಹೆಚ್ಚಿನ ಕಾಳಜಿ ಇರುವ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ ಅವರು ಸಾಕಷ್ಟು ಅನುಭವಿಗಳು. ಪ್ರಶ್ನೆ ಪತ್ರಿಕೆ ಲೀಕ್ ಆಗುತ್ತಿದ್ದಂತೆ ತಕ್ಷಣವೇ ಸುಧಾರಣೆ ಮಾಡಿ ೧೫ ದಿನಗಳಲ್ಲಿ ಮರು ಪರೀಕ್ಷೆ ನಡೆಸಿ, ಯಾವುದೇ ಸೋರಿಕೆ ಆಗದಂತೆ ನೋಡಿಕೊಂಡಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ, ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿದರು. ಮಾಜಿ ಶಾಸಕರಾದ ಎಂ.ಕೆ.ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತ, ಜಿಪಂ ಮಾಜಿ ಅಧ್ಯಕ್ಷ ಹೂವಪ್ಪ ರಾಠೋಡ, ಬಿಜೆಪಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್, ಮುಖಂಡರಾದ ಡಾ.ಶೇಖರ ಮಾನೆ, ಮಲ್ಲಯ್ಯ ಮೂಗನೂರಮಠ, ಬಸವರಾಜ ಯಂಕAಚಿ, ಅಶೋಕ ಲಿಂಬಾವಳಿ, ಯಲ್ಲಪ್ಪ ಬೆಂಡಿಗೇರಿ, ವೀರಣ್ಣ ಹಳೇಗೌಡರ, ಶಾಂತಾಬಾಯಿ ಗೋಣಿ, ಶಶಿಕಲಾ ಮಜ್ಜಗಿ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net