ಅಕ್ಕಮಹಾದೇವಿಯ ಆದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪ

 ಬನಹಟ್ಟಿಯ ಮಹಾದೇವರ ದೇವಸ್ಥಾನದಲ್ಲಿ ಅಕ್ಕಮಹಾದೇವಿ ಜಯಂತ್ಯುತ್ಸವ ಅಂಗವಾಗಿ  ಹಮ್ಮಿಕೊಂಡಿದ್ದ ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಕಸ್ತೂರಿ ಹುಲಗಬಾಳಿ, ರಜನಿ ಶೇಠೆ ಸೇರಿ ದಂತೆ ಇತರರು ಇದ್ದರು.
ಬನಹಟ್ಟಿಯ ಮಹಾದೇವರ ದೇವಸ್ಥಾನದಲ್ಲಿ ಅಕ್ಕಮಹಾದೇವಿ ಜಯಂತ್ಯುತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಕಸ್ತೂರಿ ಹುಲಗಬಾಳಿ, ರಜನಿ ಶೇಠೆ ಸೇರಿ ದಂತೆ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹನ್ನೆರಡನೇ ಶತಮಾನದ ಮಹಾನ್ ಶಿವಶರಣೆ ಅಕ್ಕಮಹಾದೇವಿ
  • ಅಕ್ಕಮಹಾದೇವಿ ಮಹಿಳಾ ಬಣಜಿಗ ಸಮಾಜದ ಅಧ್ಯಕ್ಷೆ ಕಸ್ತೂರಿ ಹುಲಗಬಾಳಿ ಹೇಳಿದರು
  • ಅಕ್ಕಮಹಾದೇವಿ ಜಯಂತ್ಯುತ್ಸವ
ರಬಕವಿ/ಬನಹಟ್ಟಿ: ಹನ್ನೆರಡನೇ ಶತಮಾನದ ಮಹಾನ್ ಶಿವಶರಣೆ ಅಕ್ಕಮಹಾದೇವಿ ಮಹಿಳೆಯರ ಸ್ವಾಭಿಮಾನ, ಧೈರ್ಯ ಮತ್ತು ಸಮಾನತೆಯ ಸಂಕೇತವಾಗಿದ್ದಾರೆ ಎಂದು ಅಕ್ಕಮಹಾದೇವಿ ಮಹಿಳಾ ಬಣಜಿಗ ಸಮಾಜದ ಅಧ್ಯಕ್ಷೆ ಕಸ್ತೂರಿ ಹುಲಗಬಾಳಿ ಹೇಳಿದರು.
ಬನಹಟ್ಟಿಯ ಮಹಾದೇವರ ದೇವಸ್ಥಾನದಲ್ಲಿ ಗುರುವಾರ ರಾತ್ರಿ ಅಕ್ಕಮಹಾದೇವಿ ಮಹಿಳಾ ಬಣಜಿಗ ಸಮಾಜದ ವತಿಯಿಂದ ಅಕ್ಕಮಹಾದೇವಿ ಜಯಂತ್ಯುತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರ, ಸಂಪತ್ತು, ಆಡಂಬರ ಹಾಗೂ ಭೋಗವಿಲಾಸವನ್ನು ತ್ಯಜಿಸಿ ಸರಳ ಜೀವನ ನಡೆಸಿದ ಅಕ್ಕಮಹಾದೇವಿಯ ಆದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದರು.
ಅಕ್ಕಮಹಾದೇವಿಯ ವಚನಗಳು ಮಾನವೀಯ ಮೌಲ್ಯಗಳನ್ನು ಬಲಪಡಿಸುವಂತಿದ್ದು, ಅವರ ನಡೆ-ನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಲಿದೆ ಎಂದು ಅಭಿಪ್ರಾಯಪಟ್ಟರು.
ರಜನಿ ಶೇಠೆ, ಶ್ರೀದೇವಿ ಬಿದರಿ, ಕಮಲಾ ಬಂದಿ, ಶಾಂತಾ ಬಿದರಿ, ಕವಿತಾ ಬಿದರಿ, ಕಲಾವತಿ ಪಟ್ಟಣಶೆಟ್ಟಿ, ಸುಮಾ ಕುಂಚನೂರ, ಶಕುಂತಲಾ ಹುಬ್ಬಳ್ಳಿ, ಕಸ್ತೂರಿ ಭದ್ರನ್ನವರ, ಸ್ನೇಹಾ ತುಂಗಳ, ಶಶಿಕಲಾ ಜಿಗಜಿನ್ನಿ, ಮಹಾದೇವಿ ಸಗರಿ, ಪಾರ್ವತಿ ಪೂಜಾರಿ, ಮಲ್ಲವ್ವ ಪೂಜಾರಿ ಸೇರಿ ಅನೇಕ ಮಹಿಳೆಯರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net