ಯೋಗವು ಕೇವಲ ದೈಹಿಕ ವ್ಯಾಯಾಮವಷ್ಟೇ ಅಲ್ಲದೆ ಮಾನಸಿಕ ಶಾಂತಿ, ಒತ್ತಡ ನಿವಾರಣೆ ಹಾಗೂ ಸಮತೋಲನಯುತ ಜೀವನಕ್ಕೆ ಮಾರ್ಗದರ್ಶಕವಾಗಿದೆ
ರಬಕವಿ/ಬನಹಟ್ಟಿ: ಇಂದಿನ ಜಂಜಾಟದ ಜೀವನಶೈಲಿಯಲ್ಲಿ ಆರೋಗ್ಯದತ್ತ ನಿರ್ಲಕ್ಷೃ ಹೆಚ್ಚುತ್ತಿರುವ ಹಿನ್ನೆಲೆ, ಪ್ರತಿದಿನ ಯೋಗ, ವ್ಯಾಯಾಮ ಹಾಗೂ ಸರಿಯಾದ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ ಎಂದು ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.
ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಜಮಖಂಡಿಯ ಅರುಣ ತಿಕೋಟಿಕರ ಗುರುಜೀ ಅವರ ನೇತತ್ವದಲ್ಲಿ ಸೋಮವಾರ ನಡೆದ ಸಿದ್ಧ ಸಮಾದಿ ಯೋಗ ಶಿಬಿರದಲ್ಲಿ ಅವರು ಮಾತನಾಡಿದರು.
ಯೋಗವು ಕೇವಲ ದೈಹಿಕ ವ್ಯಾಯಾಮವಷ್ಟೇ ಅಲ್ಲದೆ ಮಾನಸಿಕ ಶಾಂತಿ, ಒತ್ತಡ ನಿವಾರಣೆ ಹಾಗೂ ಸಮತೋಲನಯುತ ಜೀವನಕ್ಕೆ ಮಾರ್ಗದರ್ಶಕವಾಗಿದೆ ಎಂದು ತಿಳಿಸಿದರು.
ಯೋಗ ಗುರು ಅರುಣ ತಿಕೋಟಿಕರ ಮಾತನಾಡಿ, ಶಿಬಿರದಲ್ಲಿ ಧ್ಯಾನ ಮತ್ತು ಪ್ರಾಣಾಯಾಮದ ಮೂಲಕ ಮನಸ್ಸಿನ ಏಕಾಗ್ರತೆ ಹೆಚ್ಚಿಸುವ ತರಬೇತಿ ನೀಡಲಾಗುತ್ತಿದೆ ಎಂದರು. ಆರೋಗ್ಯಕರ ಜೀವನಶೈಲಿಗಾಗಿ ಸರಿಯಾದ ಆಹಾರ ಪದ್ಧತಿ, ಸಕಾರಾತ್ಮಕ ಚಿಂತನೆ ಹಾಗೂ ನಕಾರಾತ್ಮಕ ಭಾವನೆಗಳಿಂದ ದೂರವಿರುವ ವಿಧಾನಗಳ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಹೇಳಿದರು.
ನಿತ್ಯ ಜೀವನದಲ್ಲಿ ಯೋಗ, ಧ್ಯಾನ ಅಳವಡಿಸಿಕೊಂಡರೆ ದೈಹಿಕ, ಮಾನಸಿಕ ಆರೋಗ್ಯ ಸುಧಾರಿಸಿ, ಔಷಧಿ ಅವಲಂಬನೆ ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು. ಮಹಿಳೆಯರು, ಯುವಕರು ಹಾಗೂ ವದ್ಧರು ಭಾಗವಹಿಸಿದ್ದರು.