ಭ್ರಷ್ಟರ ವಿರುದ್ಧ ಕ್ರಮ ತೆಗೆದುಕೊಳ್ಳಿ

ಗುಳೇದಗುಡ್ಡ ಪುರಸಭೆ ಎದುರು ಬಿಜೆಪಿ ಕೈಗೊಂಡಿರುವ ಹೋರಾಟದಲ್ಲಿ ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿದರು. ಸತ್ಯಾಗ್ರಹದಲ್ಲಿ ರಂಗಪ್ಪ ಸೇಬಿನಕಟ್ಟಿ, ಮಧುಸೂಧನ ರಾಂದಡ, ಭಾಗ್ಯ ಉದ್ನೂರ, ಶಂಕ್ರಪ್ಪ ಜನಿವಾರ, ಕಾಶಿನಾಥ ಕಲಾಲ,  ಶಂಕ್ರಪ್ಪ ಶಿರೂರ, ಪ್ರಶಾಂತ ಜವಳಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ರಾಜಶೇಖರ ಶೀಲವಂತ ಆಗ್ರಹ
  • ಐದನೇ ದಿನಕ್ಕೆ ಕಾಲಿಟ್ಟ ಹೋರಾಟ
  • ಪುರಸಭೆಯಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದವರನ್ನು ಶಾಸಕರು ರಕ್ಷಣೆ ಮಾಡುತ್ತಿದ್ದಾರೆ.
ಗುಳೇದಗುಡ್ಡ : ಪಟ್ಟಣದ ಪುರಸಭೆಯಲ್ಲಿ ಸಿಬ್ಬಂದಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಸ್ಥಳೀಯ ಪುರಸಭೆ ಎದುರು ಕೈಗೊಂಡಿರುವ ಸರದಿ ಸತ್ಯಾಗ್ರಹ ಶುಕ್ರವಾರ ನಾಲ್ಕನೇ ದಿನ ಪೂರೈಸಿತು.
ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ಪುರಸಭೆಯಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದವರನ್ನು ಶಾಸಕರು ರಕ್ಷಣೆ ಮಾಡುತ್ತಿದ್ದಾರೆ. ಹೀಗೇ ಮುಂದುವರಿದರೆ ಶಾಸಕರ ವಿರುದ್ಧವೂ ಹೋರಾಟ ಮಾಡಬೇಕಾಗುತ್ತದೆ. ಕಳೆದ ನಾಲ್ಕು ದಿನಗಳಿಂದ ಶಾಂತಿಯುತ ಹೋರಾಟ ಮಾಡುತ್ತಿದ್ದರೂ ಸಹ ಯಾರ ಮೇಲೆಯೂ ಕ್ರಮ ತೆಗೆದುಕೊಂಡಿಲ್ಲ. ಇದೇ ರೀತಿ ಮುಂದುವರಿದರೆ ಬೀದಿಗಿಳಿದು ಸಾರ್ವಜನಿಕರೊಂದಿಗೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸತ್ಯಾಗ್ರಹದಲ್ಲಿ ರಂಗಪ್ಪ ಸೇಬಿನಕಟ್ಟಿ, ಮಧುಸೂಧನ ರಾಂದಡ, ಭಾಗ್ಯ ಉದ್ನೂರ, ಶಂಕ್ರಪ್ಪ ಜನಿವಾರ, ಕಾಶಿನಾಥ ಕಲಾಲ, ಶಂಕ್ರಪ್ಪ ಶಿರೂರ, ಪ್ರಶಾಂತ ಜವಳಿ, ದೇವೇಂದ್ರಪ್ಪ ಗಾಯದ, ದೀಪಕ ನೇಮದಿ, ಸಿಂಧೂರ ತೋಳಮಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net