ಸತತ ಪರಿಶ್ರಮದಿಂದ ಸಾಧನೆ ಸಾಧ್ಯ

ಗುಳೇದಗುಡ್ಡದ ಸರ್ಕಾರಿ ಬಾಲಕರ ಪ.ಪೂ. ಕಾಲೇಜಿನಲ್ಲಿ ಐಐಟಿ ಮದ್ರಾಸ್‌ಗೆ ಸೇರ್ಪಡೆಯಾದ ಕಾಲೇಜಿನ ವಿದ್ಯಾರ್ಥಿ ಕರಿಯಪ್ಪ ಮಾದರ ಹಾಗೂ ಅವರ ತಾಯಿಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಹಾಗೂ ಪಿಯು ಡಿಡಿ ಪುಂಡಲೀಕ ಕಾಂಬಳೆ ಸೋಮವಾರ ಸನ್ಮಾನಿಸಿ ಗೌರವಿಸಿದರು. ಕಾಲೇಜಿನ ಪ್ರಾಚಾರ್ಯ ವಿಠ್ಠಲ ಕಳಸಾ, ವೈ.ಬಿ. ಹಿರೇಗೌಡರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಫಕೀರಪ್ಪ ತಳವಾರ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಿ.ಬಿ. ಚಿಮ್ಮನಕಟ್ಟಿ ಹೇಳಿಕೆ
  • ಮದ್ರಾಸ್ ಐಐಟಿಗೆ ಕರಿಯಪ್ಪ ಮಾದರ ಆಯ್ಕೆ
ಗುಳೇದಗುಡ್ಡ: ಬಡತನ ಮನಷ್ಯನ ಜೀವನದಲ್ಲಿ ಸಾಧಿಸುವ ಛಲ ಬೆಳೆಸುತ್ತದೆ ಎನ್ನುವುದಕ್ಕೆ ಸರ್ಕಾರಿ ಕಾಲೇಜಿನಲ್ಲಿ ಓದಿದ ಕರಿಯಪ್ಪ ಮಾದರ ಸಾಕ್ಷಿಯಾಗಿದ್ದಾನೆ. ಸತತ ಅಧ್ಯಯನ ಪರಿಶ್ರಮದಿಂದ ಅಧ್ಯಯನ ಮಾಡಿ, ಇಂದು ಐಐಟಿಗೆ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಆತನ ಸಾಧನೆ ಇತರ ವಿದ್ಯಾರ್ಥಿಗಳಿಗೆ ಸೂರ್ತಿಯಾಗಲಿದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಅವರು ಪಟ್ಟಣದ ಬಾಲಕರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ 2024-25ನೇ ಸಾಲಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಕಲಿತ ವಿದ್ಯಾರ್ಥಿ ಕರಿಯಪ್ಪ ಮಾದರ ಐಐಟಿ ಮದ್ರಾಸ್ ಇನ್ಟಿಟ್ಯೂಟ್‌ಗೆ ಆಯ್ಕೆಯಾದ ಪ್ರಯುಕ್ತ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಎಷ್ಟೋ ಮಕ್ಕಳಿಗೆ ಮನೆಯಲ್ಲಿ ಸಿರಿವಂತಿಕೆ ಇರುತ್ತದೆ. ಆದರೆ ಅವರೆಲ್ಲರೂ ಇಂತಹ ಸಾಧನೆ ಮಾಡುವುದು ವಿರಳ. ಕರಿಯಪ್ಪ ನನ್ನ ಮತಕ್ಷೇತ್ರದ ಹಾನಾಪುರ ಎಸ್.ಪಿ. ಗ್ರಾಮದವನೆಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ. ಐಐಟಿ ಅಂದರೆನೇ ಗೊತ್ತಿಲ್ಲದ ತಾಯಿ ತನ್ನ ಮಗ ಐಐಟಿ ಸೇರುವಂತೆ ಮಾಡಿದ್ದಾಳೆ. ಮಗನ ಪರಿಶ್ರಮಕ್ಕೆ ಬೆನ್ನೆಲುಬಾಗಿ ತಾಯಿ ನಿಂತಿದ್ದರಿಂದ ಮಗ ಐಐಟಿಗೆ ಆಯ್ಕೆಯಾಗಿದ್ದಾನೆ ಎಂದರು.
ಬಾಗಲಕೋಟೆಯ ಜಿಲ್ಲಾ ಪಪೂ (ಶಾಲಾ ಶಿಕ್ಷಣ) ಇಲಾಖೆಯ ಉಪ ನಿರ್ದೇಶಕ ಪುಂಡಲೀಕ ಕಾಂಬಳೆ, ಕಾಲೇಜಿನ ಪ್ರಾಚಾರ್ಯ ವಿಠ್ಠಲ ಕಳಸಾ, ವೈ.ಬಿ. ಹಿರೇಗೌಡರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಫಕೀರಪ್ಪ ತಳವಾರ, ರಮೇಶ ಹಿರೇಗೌಡರ, ರಾಜು ಸಂಗಮ, ಮೂಕಪ್ಪ ಹುನ್ನೂರ ಇದ್ದರು. ಬಿ.ವೈ. ಗೌಡರ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net