ಡಿಸಿಸಿ ಬ್ಯಾಂಕ್ ಆಡತಾಧಿಕಾರಿಯಾಗಿರುವ ಸಿಇಒ ಶಶಿಧರ ಕುರೇರ ಅವರು, ಕೆರೂರಿನ ಬಿಡಿಸಿಸಿ ಬ್ಯಾಂಕ್‌ಗೆ ಭೇಟಿ ನೀಡಿ, ಬ್ಯಾಂಕಿನ ಕಾರ್ಯ ವೈಖರಿ, ಗ್ರಾಹಕ ಸೇವೆ, ಸಾಲ ವಿತರಣೆ ಹಾಗೂ ರೈತರು ಮತ್ತು ಸ್ವಸಹಾಯ ಸಂಘಗಳಿಗೆ ದೊರೆಯುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಸಾರ್ವಜನಿಕರಿಗೆ ಪಾರದರ್ಶಕ ಹಾಗೂ ಸಮಯೋಚಿತ ಸೇವೆ ಒದಗಿಸುವಂತೆ ಬ್ಯಾಂಕ್ ಸಿಬ್ಬಂದಿಗೆ ಸೂಚನೆ ನೀಡಿದರು.