ಕಥೆಗಾರನಿಗೆ ಸಮಷ್ಠಿ ಪ್ರಜ್ಞೆ ಅಗತ್ಯ

ಬಾಗಲಕೋಟೆ ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯ ಕನ್ನಡ, ಇಂಗ್ಲಿಷ್ ಸ್ನಾತಕೋತ್ತರ ವಿಭಾಗಗಳು, ಕನ್ನಡ ನುಡಿ ವೇದಿಕೆ ಹಾಗೂ ಐಕ್ಯೂಎಸ್‌ಸಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 'ಕಥಾ ಕಮ್ಮಟ' ಕಾರ್ಯಕ್ರಮದಲ್ಲಿ ಕಥೆಗಾರ ಲಕ್ಷ್ಮಣ ಬಾದಾಮಿ ಮಾತನಾಡಿದರು. ಪ್ರಾಚಾರ್ಯ ಪ್ರೊ. ಎಸ್.ಆರ್. ಮುಗನೂರಮಠ, ಕಥೆಗಾರ ಮಲ್ಲಿಕಾರ್ಜುನ ಸಜ್ಜನ, ಕಥೆಗಾರ್ತಿ ಮುರ್ತುಜಾ ಬೇಗಂ ಕೊಡಗಲಿ ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕಥೆಗಾರ ಲಕ್ಷ್ಮಣ ಬದಾಮಿ ಅನಿಸಿಕೆ
  • ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಕಥಾ ಕಮ್ಮಟ
ಬಾಗಲಕೋಟೆ: ಕಥೆ ಕಟ್ಟುವವನಿಗೆ ಭಾಷೆ, ಭಾವ, ವಾಸ್ತವ ಹಾಗೂ ಸಾಮಾಜಿಕ ಹಾಗೂ ಪರಿಸರದ ಪ್ರಜ್ಞೆ ಇರಬೇಕು ಜೊತೆಗೆ ಸಮಷ್ಠಿ ಪ್ರಜ್ಞೆ ಅಗತ್ಯ ಅಂದಾಗ ಮಾತ್ರ ಅವು ಓದುಗರನ್ನು ತಲುಪಿ ಜನ ಮಾನಸದಲ್ಲಿ ಉಳಿಯಲು ಸಾಧ್ಯ ಎಂದು ಕಥೆಗಾರ ಲಕ್ಷ್ಮಣ ಬದಾಮಿ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯ ಕನ್ನಡ, ಇಂಗ್ಲಿಷ್ ಸ್ನಾತಕೋತ್ತರ ವಿಭಾಗಗಳು, ಕನ್ನಡ ನುಡಿ ವೇದಿಕೆ ಹಾಗೂ ಐಕ್ಯೂಎಸ್‌ಸಿ ಸಹಯೋಗದಲ್ಲಿ ಜರುಗಿದ 'ಕಥಾ ಕಮ್ಮಟ'ದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕಥೆಗಳು ಮನುಷ್ಯನ ಎಲ್ಲ ಬಗೆಯ ಸಮಸ್ಯೆಗಳಿಗೆ ಪರಿಹಾರ ನೀಡುವ ಮಾಧ್ಯಮಗಳಾಗಿದ್ದು, ವಿದ್ಯಾರ್ಥಿಗಳು ಈ ಬಗೆಯ ಕಮ್ಮಟ ಗಳಲ್ಲಿ ಪಾಲ್ಗೊಳ್ಳುವುದರಿಂದ ಕಥನ ಕೌಶಲ ಹೆಚ್ಚುತ್ತದೆ ಎಂದರು.
ಪ್ರಾಚಾರ್ಯ ಪ್ರೊ. ಎಸ್.ಆರ್. ಮುಗನೂರಮಠ ಮಾತನಾಡಿ, ಕಥನ ಕಟ್ಟುವಲ್ಲಿ ಮನೋವೈಜ್ಞಾನಿಕ ಪ್ರಭಾವದ ಕುರಿತು ಹೇಳುವ ಕಾರ್ಯವಾಗಬೇಕಿದೆ. ಇಂತಹ ಕಮ್ಮಟಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳ ಮನೋವಿಕಾಸ ಹಾಗೂ ಕಥೆ ಬರೆಯುವ ಕೌಶಲ ವೃದ್ಧಿಸುತ್ತದೆ ಎಂದು ತಿಳಿಸಿದರು.
ಕಥೆಗಾರ ಮಲ್ಲಿಕಾರ್ಜುನ ಸಜ್ಜನ, ಕಥೆಗಾರ್ತಿ ಮುರ್ತುಜಾ ಬೇಗಂ ಕೊಡಗಲಿ ಹಾಗೂ ಕಥೆಗಾರ ಹಾಗೂ ನಾಟಕಕಾರ ಹಣಮಂತ ಹಾಲಗೇರಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ವಿದ್ಯಾರ್ಥಿಗಳ ಕಥೆ ವಾಚನ ಆಲಿಸಿ ಸಂವಾದ ನಡೆಸಿದರು.
ಅನೀಲ್ ಗುನ್ನಾಪುರ, ಮುತ್ತು ಬಳ್ಳಾ, ಡಾ. ಎಸ್.ಡಿ. ಕೆಂಗಲಗುತ್ತಿ, ಪ್ರೊ. ಕೆ.ವಿ. ಮಠ, ಶ್ರೀಹರಿ ಧೂಪದ ಇದ್ದರು. ಡಾ. ಬಸವರಾಜ ಕುಂಬಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನಂದಿನಿ ಅಂಕದ ಹಾಗೂ ಗಾಯತ್ರಿ ಪಾಟೀಲ ನಿರೂಪಿಸಿದರು. ಪಾರ್ವತಿ ಗಡಗಿ ಪ್ರಾರ್ಥಿಸಿದರು, ಡಾ. ವೀಣಾ ಕಲ್ಮಠ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net