ಕಷಿಕರಾಗಿರುವ ಬಸವರಾಜ ಹಾಗೂ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಭೀಮಶಿ, ಏಪ್ರಿಲ್ 15ರಂದು ವಜ್ಜರಮಟ್ಟಿಯಿಂದ ಯಾತ್ರೆ ಆರಂಭಿಸಿದರು. ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶಗಳ ಮೂಲಕ ನೇಪಾಳ ತಲುಪಿದ ಅವರು ದಾರಿಯುದ್ದಕ್ಕೂ ತುಳಜಾಪುರ ಅಂಬಾಭವಾನಿ, ನರ್ಮದಾ ಘಾಟ್, ಪ್ರಯಾಗರಾಜ್, ಅಯೋಧ್ಯೆ ಸೇರಿ ಹಲವು ಧಾರ್ಮಿಕ- ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದರು.