ಗಮನಸೆಳೆದ ಬೈಕ್ ರ‍್ಯಾಲಿ

ಬಾಗಲಕೋಟೆ ನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 135ನೇ ಜಯಂತಿ ಅಂಗವಾಗಿ ಬೈಕ್ ರ‍್ಯಾಲಿ ಜರುಗಿತು. ಅರುಣ ಗರಸಂಗಿ, ರಾಮಪ್ಪ ನಾರಾಯಣಿ, ಗಿರಿಯಪ್ಪ ನಾರಾಯಣಿ, ದಿಲೀಪ ಢವಳೇಶ್ವರ ಇತರರಿದ್ದರು.
ಬಾಗಲಕೋಟೆ ನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 135ನೇ ಜಯಂತಿ ಅಂಗವಾಗಿ ಬೈಕ್ ರ‍್ಯಾಲಿ ಜರುಗಿತು. ಅರುಣ ಗರಸಂಗಿ, ರಾಮಪ್ಪ ನಾರಾಯಣಿ, ಗಿರಿಯಪ್ಪ ನಾರಾಯಣಿ, ದಿಲೀಪ ಢವಳೇಶ್ವರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಅಂಬೇಡ್ಕರ್
  • 135ನೇ ಜಯಂತಿ ಆಚರಣೆ
ಬಾಗಲಕೋಟೆ: ಡಾ. ಬಾಬಾಸಾಹೇಬ ಅಂಬೇಡ್ಕರ್ 135ನೇ ಜಯಂತಿ ಅಂಗವಾಗಿ ಸೋಮವಾರ ನಗರದಲ್ಲಿ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಬೈಕ್ ರ‍್ಯಾಲಿ ನಡೆಯಿತು.
ಸತ್ಯ ಶೋಧಕ ಸಂಘ, ಸಾಮ್ರಾಟ ಅಶೋಕ ಕ್ರೀಡಾ ಸಂಸ್ಥೆ, ಅಂಬೇಡ್ಕರ್ ಅಭಿಮಾನಿಗಳು ಸೇರಿ ನೂರಾರು ಜನರು ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಅಂಬೇಡ್ಕರ್ ನಗರದಿಂದ ಆರಂಭವಾದ ರ‍್ಯಾಲಿಯು ಪಂಕಾ ಮಸಜಿದ್, ಪೊಲೀಸ್ ಚೌಕ್ ಮಾರ್ಗವಾಗಿ ಬಸವೇಶ್ವರ ಸರ್ಕಲ್, ಅಂಬೇಡ್ಕರ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಕೊನೆಗೆ ನವನಗರದಲ್ಲಿರುವ ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸಂಪನ್ನಗೊಂಡಿತು.ರ‍್ಯಾಲಿಯಲ್ಲಿ ಜೈಭೀಮ ಘೋಷಣೆಗಳು ಮೊಳಗಿದವು. ಸಂವಿಧಾನದ ಮಹತ್ವ ಹಾಗೂ ಸಮಾನತೆ ಸಂದೇಶದ ಬಗ್ಗೆ ಜಾಗೃತಿ ಮೂಡಿಸಲು ರ‍್ಯಾಲಿ ನಡೆಸಲಾಯಿತು.
ಸತ್ಯ ಶೋಧಕ ಸಂಘದ ಅಧ್ಯಕ್ಷ ಪರಶುರಾಮ ಮಹಾರಾಜನವರ ಮಾತನಾಡಿ, ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಅರುಣ ಗರಸಂಗಿ ಮಾತನಾಡಿ, ಯುವಕರು ಡಾ. ಅಂಬೇಡ್ಕರ್ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ರ‍್ಯಾಲಿಯಲ್ಲಿ ರಾಮಪ್ಪ ನಾರಾಯಣಿ, ಗಿರಿಯಪ್ಪ ನಾರಾಯಣಿ, ದಿಲೀಪ ಡವಳೇಶ್ವರ, ಬಂಡೆಪ್ಪ ನಾರಾಯಣಿ, ಮುತ್ತಪ್ಪ ಆರೆತ್ತಿನವರ, ರಾಮು ನಾರಾಯಣಿ, ಕಿರಣ ನೀಲನಾಯಕ, ರಾಮಣ್ಣ ಹೊಸಳ್ಳಿ, ಸುನೀಲ ಬಂಡಿ, ಸಿದ್ದಣ್ಣ ಮಾವಿನತೋಟ, ಕುಮಾರ ಬಿಚ್ಚೇಲಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net