ತಾಯಿಯ ತ್ಯಾಗ-ಪ್ರೀತಿ ಅಪ್ರತಿಮ

 ರಬಕವಿ ಚಂದು ಕಾಕಾ ಸರಾಫ್  ಜ್ಯುವೆಲ್ಸ್‌ನಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಾಯಂದಿರ ದಿನ ಕಾರ್ಯಕ್ರಮವನ್ನು ಗಂಗಾ ಬುದ್ನಿ, ಇತರ ಮಹಿಳೆಯರು ಉದ್ಘಾಟಿಸಿದರು.
ರಬಕವಿ ಚಂದು ಕಾಕಾ ಸರಾಫ್ ಜ್ಯುವೆಲ್ಸ್‌ನಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಾಯಂದಿರ ದಿನ ಕಾರ್ಯಕ್ರಮವನ್ನು ಗಂಗಾ ಬುದ್ನಿ, ಇತರ ಮಹಿಳೆಯರು ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಚಂದುಕಾಕಾ ಸರಾಫ್ ಜ್ಯುವೆಲ್ಸ್‌ನ ಗಂಗಾ ಬುದ್ನಿ ಅಭಿಮತ
  • ಪ್ರತಿಯೊಬ್ಬರ ಬದುಕಿನಲ್ಲಿಯೂ ತಾಯಿಗೆ ಅತಿ ಮಹತ್ವದ ಸ್ಥಾನವಿದೆ.
  • ವಿಶ್ವ ತಾಯಂದಿರ ದಿನ
ರಬಕವಿ : ಪ್ರತಿಯೊಬ್ಬರ ಬದುಕಿನಲ್ಲಿಯೂ ತಾಯಿಗೆ ಅತಿ ಮಹತ್ವದ ಸ್ಥಾನವಿದೆ. ಅವಳ ಋಣ ತೀರಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಚಂದುಕಾಕಾ ಸರಾಫ್ ಜ್ಯುವೆಲ್ಸ್‌ನ ಗಂಗಾ ಬುದ್ನಿ ಹೇಳಿದರು.
ನಗರದ ಚಂದುಕಾಕಾ ಸರಾಫ್ ಜ್ಯುವೆಲ್ಸ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ತಾಯಂದಿರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಯಿಯ ಪ್ರೀತಿ, ತ್ಯಾಗ ಮತ್ತು ಮಮತೆಯ ಮಹತ್ವ ಒತ್ತಿ ಹೇಳಿ, ತಾಯಿ ಪ್ರೀತಿ ಎಲ್ಲ ಪ್ರೀತಿಗಳಿಗಿಂತ ಶ್ರೇಷ್ಠವಾಗಿದ್ದು, ಪ್ರತಿ ದಿನವನ್ನೂ ತಾಯಂದಿರ ದಿನವಾಗಿ ಆಚರಿಸಬೇಕು ಎಂದರು.
ಸಂಸ್ಥೆ ಮುಖ್ಯಸ್ಥ ಶ್ರೀನಿಕ್ ಶೆಟ್ಟಿ ಮಾತನಾಡಿ, ತಾಯಿ ಮೇಲಿನ ಗೌರವ ಮತ್ತು ಪ್ರೀತಿ ಜೀವನದ ಭಾಗವಾಗಿದ್ದು, ಪ್ರತಿದಿನವೂ ತಾಯಿಗೆ ನಮಸ್ಕರಿಸುವ ಸಂಸ್ಕೃತಿ ನಮ್ಮದಾಗಿದೆ ಎಂದರು. ತಾಯಿ ಸ್ಥಾನ ಸಮಾಜದಲ್ಲಿ ಅತ್ಯುನ್ನತವಾಗಿದ್ದು, ಆಕೆಗೆ ಸಲ್ಲಿಸುವ ಗೌರವವೇ ನಮ್ಮ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಆನಂದ ಕರಡಿಮಠ, ಸಂಜು ನಾಯಿಕ, ಅಭಿಷೇಕ ಗೌರಾಜಿ ಹಲವರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net