ಬಿಜೆಪಿ ಬೆಂಬಲಿತರ ಭರ್ಜರಿ ಜಯ

ಮುಧೋಳ ಟಿಎಪಿಸಿಎಂಎಸ್ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತರು ಆಯ್ಕೆಯಾದ ನಿರ್ದೇಶಕರನ್ನು ಸನ್ಮಾನಿಸಲಾಯಿತು. ಸಂಗಣ್ಣಗೌಡ ಪಾಟೀಲ, ಕರಬಸಯ್ಯ ಹಿರೇಮಠ, ಗುರುಪಾದ ಕುಳಲಿ, ವಿವೇಕ ಕಕರಡ್ಡಿ, ದ್ಯಾವಪ್ಪ ನಾಯಿಕ ಇತರರಿದ್ದರು.
ಮುಧೋಳ ಟಿಎಪಿಸಿಎಂಎಸ್ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತರು ಆಯ್ಕೆಯಾದ ನಿರ್ದೇಶಕರನ್ನು ಸನ್ಮಾನಿಸಲಾಯಿತು. ಸಂಗಣ್ಣಗೌಡ ಪಾಟೀಲ, ಕರಬಸಯ್ಯ ಹಿರೇಮಠ, ಗುರುಪಾದ ಕುಳಲಿ, ವಿವೇಕ ಕಕರಡ್ಡಿ, ದ್ಯಾವಪ್ಪ ನಾಯಿಕ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಧೋಳ ಟಿಎಪಿಸಿಎಂಎಸ್‌
  • ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಮುಧೋಳ : ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ (ಟಿಎಪಿಸಿಎಂಎಸ್) ಆಡಳಿತ ಮಂಡಳಿ ನಿರ್ದೇಶಕರು ಈಗಾಗಲೇ ಚುನಾಯಿತರಾಗಿದ್ದು, ಗುರುವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಽಸಿ, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿ ಡಾ. ಚಿಕ್ಕಪ್ಪ ನಾಯಿಕ, ಟಿಎಪಿಸಿಎಂಎಸ್ ಪ್ರಭಾರ ವ್ಯವಸ್ಥಾಪಕ ಶ್ರೀನಿವಾಸ ಸಾರವಾಡ ಅವರ ಸಮ್ಮುಖದಲ್ಲಿ ನಡೆದ ಪ್ರಕ್ರಿಯೆಯಲ್ಲಿ, ಮಂಡಳಿ ಓರ್ವ ಪಕ್ಷೇತರ ಸದಸ್ಯ ಹಾಗೂ ಓರ್ವ ಕಾಂಗ್ರೆಸ್ ಸದಸ್ಯರನ್ನು ಹೊರತುಪಡಿಸಿ ಉಳಿದವರೆಲ್ಲರೂ ಬಿಜೆಪಿ ಬೆಂಬಲಿತರಾಗಿದ್ದರಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನೆರವೇರಿತು.
ನೂತನ ಅಧ್ಯಕ್ಷ ವಿವೇಕ ವಸಂತ ಕಕರಡ್ಡಿ ಮತ್ತು ಉಪಾಧ್ಯಕ್ಷ ದ್ಯಾವಪ್ಪ ಸೋಮಲಿಂಗಪ್ಪ ನಾಯಿಕ ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಂಘದ ಸರ್ವತೋಮುಖ ಅಭಿವೃದ್ಧಿಗೆ ಬದ್ಧರಾಗಿರುತ್ತೇವೆ. ರೈತರ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಮಹತ್ವದ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಪಾರದರ್ಶಕ ಆಡಳಿತದ ಮೂಲಕ ಸಂಘವನ್ನು ರಾಜ್ಯದಲ್ಲೇ ಮಾದರಿಯನ್ನಾಗಿ ರೂಪಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಧ್ಯಕ್ಷ ಸಂಗಣ್ಣ ಕಾತರಕಿ ಮಾತನಾಡಿದ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಈ ಗೆಲುವು ರೈತರ ಗೆಲುವು. ಸಹಕಾರಿ ರಂಗದಲ್ಲಿ ಹೊಸ ಬದಲಾವಣೆಗೆ ಈ ಜಯ ನಾಂದಿ ಹಾಡಿದೆ. ಆಡಳಿತ ಮಂಡಳಿ ರೈತರ ಸೇವೆಗೆ ಹೆಚ್ಚಿನ ಒತ್ತು ನೀಡಲಿದೆ ಎಂದು ಹೇಳಿದರು.
ನಿರ್ದೇಶಕರಾದ ಮಂಜುನಾಥ ಅರಳಿಕಟ್ಟಿ, ಮಹಾಲಿಂಗಪ್ಪ ಸನದಿ, ಮಾರುತಿ ರಂಗನ್ನವರ, ಸಂತೋಷ ಪಾಟೀಲ, ಹಣಮಂತಗೌಡ ಪಾಟೀಲ, ಶ್ರೀಶೈಲ ಗುರವ, ಅಜೀತ ಪಾಟೀಲ, ಆಶಾ ರವಿ ಉದಪುಡಿ, ಹೇಮಾ ಗಿರೀಶ ಲಕ್ಷಾಣಿ ಮತ್ತು ತಿರುಪತಿ ಚಿನ್ನಪ್ಪ ಬಂಡಿವಡ್ಡರ ಉಪಸ್ಥಿತರಿದ್ದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಕರಬಸಯ್ಯ ಹಿರೇಮಠ, ಗುರುಪಾದ ಕುಳಲಿ, ಸದಾಶಿವ ತೇಲಿ, ಬಸಪ್ಪ ಮುಳ್ಳೂರ, ದರೆಪ್ಪ ಸಾಂಗಲೀಕರ, ಹನುಮಂತ ತುಳಸಿಗೆರಿ, ಲೋಕಣ್ಣ ಕತ್ತಿ, ಮಾರುತಿ ಕರೆಯನ್ನವರ, ಸದಾಶಿವ ಇಟ್ಕನ್ನವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net