ಮೋದಿ ಅವರು ಜನ್-ಧನ್ ಯೋಜನೆ, ಆಯುಷ್ಮಾನ್ ಭಾರತ, ಪಿಎಂ ಆವಾಸ್, ಜನ ಜೀವನ್ ಮಿಷನ್, ಪಿಎಂ ಸ್ವನಿಽ ಯೋಜನೆ, ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ, ಕೃಷಿ ಚಿಂಚಾಯಿ, ಕಿಸಾನ್ ಕ್ರೆಡಿಟ್ ಕಾರ್ಡ್, ದೀದಿ ಯೋಜನೆ, ಸೂರ್ಯ ಘರ್ ಹೀಗೆ ಹತ್ತು ಹಲವು ಜನಪರ ಯೋಜನೆಗಳ ಮೂಲಕ ದೇಶವನ್ನು ಪ್ರಗತಿಯ ತುತ್ತತುದಿಗೆ ಕೊಂಡೊಯ್ದಿದ್ದಾರೆ. 12 ವರ್ಷಗಳ ಆಡಳಿತದಲ್ಲಿ ದೇಶದ ಅಭಿವೃದ್ಧಿಯ ಜೊತೆಗೆ ಸಂಸ್ಕೃತಿ, ರಾಷ್ಟçದ ಸ್ವಾಭಿಮಾನ ಹಾಗೂ ಗೌರವವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಶ್ಲಾಘಿಸಿದರು.