7, 8 ರಂದು ಅದ್ದೂರಿ ಯಲಗೂರೇಶ ಕಾರ್ತಿಕೋತ್ಸವ

ಯಲಗೂರೇಶ್ವರ
ಯಲಗೂರೇಶ್ವರ
Published on

ಪ್ರಮುಖ ಮುಖ್ಯಾಂಶಗಳು

  • ನಿತ್ಯ ವಿಶೇಷ ಪೂಜೆ, ಹೋಮಹವನ
  • ಪ್ರಖ್ಯಾತ ಸಂಗೀತಗಾರರಿಂದ ಸಂಗೀತ ಸೇವೆ,
  • ನಾಟಕ ಪ್ರದರ್ಶನ, ಆರೋಗ್ಯ ಉಚಿತ ತಪಾಸಣೆ
ಆಲಮಟ್ಟಿ/ಬಾಗಲಕೋಟೆ : ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಯಲಗೂರ ಕ್ಷೇತ್ರದ ಯಲಗೂರೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಫೆ. 7 ಮತ್ತು 8ರಂದು ಸಂಭ್ರಮ ಸಡಗರದಿಂದ ನಡೆಯಲಿದೆ.
ಬೆಳಗ್ಗೆ ಪಂಚಾಮೃತ ಅಭಿಷೇಕ, ಪವಮಾನ ಹೋಮ, ಮಹಾಪೂಜೆ, ದಿಂಡಿನ ಸ್ಪರ್ಧೆ, ತೀರ್ಥ ಪ್ರಸಾದ, ಹರಿದಾಸರ ಕೀರ್ತನೆ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಫೆ. 7ರಂದು ಪಂ. ಬಸವರಾಜ ಭಜಂತ್ರಿ ಶಹನಾಯಿ ವಾದನ, ಅದಿತಿ ದೇಸಾಯಿ, ಹೃಷಿಕೇಶ ಅರಬಟ್ಟಿ, ವೈಷ್ಣವಿ ಜೋಶಿ, ಪ್ರೇಮಾ ಮತ್ತು ಸ್ನೇಹಾ ಕಡಿವಾಲ, ಡಾ. ಸಂಗೀತಾ ಕಾಖಂಡಕಿ, ನಾರಾಯಣ ತಾಸಗಾಂವ, ಸಂತೋಷ ಗದ್ದನಕೇರಿ, ಪರಿಮಳ ಗಿರಿಯಾಚಾರ್ಯ ದಾಸವಾಣಿ ಕಾರ್ಯಕ್ರಮ ನೀಡಲಿದ್ದಾರೆ.
ಮನೋಹರ ದೇಶಪಾಂಡೆ, ವಿದೂಷಿ ರೇಣುಕಾ ನಾಕೋಡ, ಪಂ. ರಘುನಾಥ ನಾಕೋಡ, ಪಂ. ರವಿಕಿರಣ ನಾಕೋಡ್, ವಿಭಾ ಹೆಗಡೆ, ಗಾಯತ್ರಿ ದೇಶಪಾಂಡೆ, ಡಾ. ವಿದುಷಿ ಸಂಗೀತಾ ಕಟ್ಟಿ (ಕುಲಕರ್ಣಿ) ಇವರುಗಳಿಂದ ದಾಸವಾಣಿ ನಡೆಯಲಿದೆ.
ದುರ್ಗಾ ಶರ್ಮ ಅವರಿಂದ ವಯಲಿನ್, ಚಂದ್ರಶೇಖರ್ ಆಲೂರ ಮತು ್ತ ಶಿವಕುಮಾರ ತಂಡದಿಂದ ಮೆಲೊಡಿಕಾ ಮತು ್ತ ಕೊಳಲು- ದಾಸ ಲಹರಿ ಹಾಗೂ ಶ್ರೀನಿಧಿ ಹರಿಮಂದಿರ (ಕೊಳಲು) ವಾದನ ಜರುಗಲಿದೆ. ಶ್ರೀಕಾಂತಾಚಾರ್ಯ ಬಿದರಕುಂದಿ ಉಪನ್ಯಾಸ ನೀಡಲಿದ್ದಾರೆ.
ಫೆ. 8ರಂದು ಹರಶವಿಗೆ ಹಾಗೂ ಅನ್ನಸಂತರ್ಪಣೆ, ಭೀರಲಿಂಗೇಶ್ವರ ಗೊಂಬೆ ಕುಣಿತ ನಡೆಯಲಿದೆ. ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಮತ್ತು ಪ್ರಸಾದ ವಿತರಣೆ, ರಾತ್ರಿ 8 ಗಂಟೆಗೆ ಹೊಂಡ ಪೂಜೆ ನಡೆಯಲಿದೆ. ಬಳಿಕ ಪಂ. ಕೆ. ಆನಂದಕುಮಾರ, ಪಂ. ವಸುಧೇಂದ್ರ ವೈದ್ಯ, ಪಂ. ವಿಜಯಕುಮಾರ ಪಾಟೀಲ ಅವರಿಂದ ದಾಸವಾಣಿ, ಪಂ. ಪ್ರವೀಣ ಹೂಗಾರ ಸಿತಾರ್, ಪಂ. ಪ್ರವೀಣ ಗೋಡಖಿಂಡಿ ಮತ್ತು ಷಡ್ಜ ಗೋಡಖಿಂಡಿ, ಪಂ. ರವೀಂದ್ರ ಯಾವಗಲ, ಕಿರಣ ಯಾವಗಲ್ ಕೊಳಲು ಮತು ್ತ ತಬಲಾ ಜುಗಲ್‌ಬಂದಿ ನಡೆಯಲಿದೆ. ಪಂ. ಜಯತೀರ್ಥ ಮೇವುಂಡಿ ಸಂಗೀತ ಕಾರ್ಯಕ್ರಮ ಜರುಗಲಿದೆ.
ಇನ್ನೂ ಫೆ. 8ರಂದು ರಾತ್ರಿ 10.30 ಗಂಟೆಗೆ ‘ತಾಯಿಯ ಋಣ ಮಣ್ಣಿನ ಗುಣ’ ನಾಟಕ, ಫೆ. 9ರಂದು ಸಂಜೆ 4 ಗಂಟೆಗೆ ಜಂಗೀ ಕುಸ್ತಿಗಳು, ರಾತ್ರಿ 10.30 ಗಂಟೆಗೆ ‘ತಾಯಿ ಇಲ್ಲದ ತವರು’ ನಾಟಕ ಪ್ರದರ್ಶನ ನಡೆಯಲಿದೆ.
ಬಿವಿವಿ ಸಂಘದ ಎಸ್. ನಿಜಲಿಂಗಪ್ಪ ಮೆಡಿಕಲ್ ಕಾಲೇಜು, ಕುಮಾರೇಶ್ವರ ಆಸ್ಪತ್ರೆಯಿಂದ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕಮೀಟಿ ಅಧ್ಯಕ್ಷ ಅನಂತ ಓಂಕಾರ ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net