ಮೇಲ್ಛಾವಣಿ ಸಿಮೆಂಟ್ ಬಿದ್ದು ೫ ಮಕ್ಕಳಿಗೆ ಗಾಯ

ಮುಗಳೊಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಕೊಠಡಿಯ ಮೇಲ್ಛಾವಣಿಯ ಸಿಮೆಂಟ್ ತುಂಡುಗಳಾಗಿ ಬಿದ್ದಿರುವುದು.
ಮುಗಳೊಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಕೊಠಡಿಯ ಮೇಲ್ಛಾವಣಿಯ ಸಿಮೆಂಟ್ ತುಂಡುಗಳಾಗಿ ಬಿದ್ದಿರುವುದು.
Published on
ಬಾಗಲಕೋಟೆ: ಶಾಲಾ ಕೊಠಡಿಯೊಂದರ ಮೇಲ್ಛಾವಣೆಯ ಸಿಮೆಂಟ್ ಉದುರಿ ಬಿದ್ದು ಐದು ಮಕ್ಕಳು ಗಾಯಗೊಂಡಿರುವ ಘಟನೆ ತಾಲೂಕಿನ ಮುಗಳೊಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
೧ ರಿಂದ ೬ನೇ ತರಗತಿ ಇರುವ ಶಾಲೆಯಲ್ಲಿ ಒಟ್ಟು ಐದು ಕೊಠಡಿಗಳು ಇದ್ದು, ಇದರಲ್ಲಿ ಎರಡು ಕೊಠಡಿಗಳು ಶಿಥಿಲಗೊಂಡಿದ್ದರಿAದ ಅವುಗಳನ್ನು ಬಂದ್ ಮಾಡಲಾಗಿತ್ತು. ಉಳಿದ ಮೂರು ಕೊಠಡಿಗಳಲ್ಲಿ ಮಕ್ಕಳ ಪಾಠಗಳು ನಡೆಯುತ್ತಿದ್ದವು.
ಒಟ್ಟು ೫೪ ವಿದ್ಯಾರ್ಥಿಗಳು ಇರುವ ಶಾಲೆಯಲ್ಲಿ ಒಂದು ಕೊಠಡಿಯಲ್ಲಿ ೫ನೇ ತರಗತಿಯ ೧೪ ವಿದ್ಯಾರ್ಥಿಗಳು ಹಾಗೂ ೬ನೇ ತರಗತಿಯ ೧೨ ವಿದ್ಯಾರ್ಥಿಗಳು ಸೇರಿ ಒಟ್ಟು ೨೬ ಮಕ್ಕಳು ಕೊಠಡಿಯಲ್ಲಿ ಇದ್ದರು.
ಬುಧವಾರ ಮಶ್ಯಾಹ್ನ ೧ ಗಂಟೆಯ ಹೊತ್ತಿಗೆ ಮೇಲ್ಛಾವಣೆಯ ಸಿಮೆಂಟ್ ತುಂಡು ತುಂಡಾಗಿ ಮಕ್ಕಳ ಮೇಲೆ ಬಿದ್ದಿವೆ. ಡೆಸ್ಕ್ನಲ್ಲಿ ಕುಳಿತಿದ್ದ ವಿದ್ಯಾರ್ಥಿಗಳ ಪೈಕಿ ಐವರು ಮಕ್ಕಳಿಗೆ ಅವು ಬಿದ್ದಿದ್ದರಿಂದ ಮೈಮೇಲೆ ಗಾಯಗಳಾಗಿವೆ.
ಪ್ರೇಮ್ ಲಮಾಣಿ ಎನ್ನುವ ವಿದ್ಯಾರ್ಥಿಯ ತಲೆಗೆ ಗಾಯವಾಗಿದ್ದು, ರಾಕೇಶ್, ಮಹೇಶ, ಸುನಿತಾ, ಸತೀಶ ಅವರ ಮೊಣಕಾಲು, ಕೈಗಳ ಮೇಲೆ ಗಾಯಗಳಾಗಿವೆ. ಎರಡ್ಮೂರು ಮಕ್ಕಳಿಗೆ ಸಣ್ಣಪುಟ್ಟ ನೋವು ಆಗಿವೆ. ಗಾಯಗೊಂಡ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.
ಮೇಲ್ಛಾವಣೆ ಸಿಮೆಂಟ್ ಉದುರಿ ಬಿದ್ದು ಮಕ್ಕಳು ಗಾಯಗೊಂಡಿರುವ ವಿಷಯ ತಿಳಿದು ಶಾಲೆಗೆ ಪಾಲಕರು ದೌಡಾಯಿಸಿ, ಮಕ್ಕಳ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಘಟನೆ ತಿಳಿದ ಬಳಿಕ ಶಾಲೆಗೆ ಕ್ಷೇತ್ರ ಶಿಕ್ಷಣಾಽಕಾರಿ ಸಿ.ವೈ.ಸಂಗಮ ಅವರು ಭೇಟಿ ನೀಡಿ, ಕೊಠಡಿ ಪರಿಶೀಲಿಸಿದ್ದು, ಸದ್ಯಕ್ಕೆ ಕೊಠಡಿಯನ್ನು ಬಂದ್ ಮಾಡಿಸಲಾಗಿದೆ. ನಾಲ್ಕು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಕೆಲ ಮಕ್ಕಳಿಗೆ ಮೈಕೈ ನೋವು ಆಗಿದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net