ಘಟನೆಯಿಂದಾಗಿ ಮುಗಳಖೋಡ ಗ್ರಾಮ ಹಾಗೂ ಆಸ್ಪತ್ರೆ ಆವರಣದಲ್ಲಿ ಪಾಲಕರು ಆತಂಕಗೊಂಡಿತ್ತು ಕಂಡುಬಂತು. ಮುಗಳಖೋಡ ಶಾಲೆಯೊಂದರಲ್ಲಿಯೇ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ನಡೆದಿದ್ದು, ಸ್ಥಳೀಯ ಆಡಳಿತ ಮತ್ತು ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದ್ದು, ವರದಿ ಪಡೆಯಲಾಗುತ್ತಿದೆ.