12 ಮೂಟೆ ಅಕ್ರಮ ಪಡಿತರ ವಶ

ತೇರದಾಳ ಪಟ್ಟಣದ ಸಿದ್ಧೇಶ್ವರ ದೇವಸ್ಥಾನ ಬಳಿ ಬಯಲು ಜಾಗೆಯಲ್ಲಿ ಅಕ್ರಮವಾಗಿ ಸಂಗ್ರಹಿಸಲಾದ ಅಕ್ಕಿ ಮೂಟೆಗಳನ್ನು ತಾಲೂಕು ಆಹಾರ ನಿರೀಕ್ಷಕ ಎಸ್.ಐ. ಸೂಡಿ, ತಹಸೀಲ್ದಾರ್ ವಿಜಯಕುಮಾರ ಕಡಕೋಳ, ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ ವಶಕ್ಕೆ ಪಡೆದುಕೊಂಡರು.
ತೇರದಾಳ ಪಟ್ಟಣದ ಸಿದ್ಧೇಶ್ವರ ದೇವಸ್ಥಾನ ಬಳಿ ಬಯಲು ಜಾಗೆಯಲ್ಲಿ ಅಕ್ರಮವಾಗಿ ಸಂಗ್ರಹಿಸಲಾದ ಅಕ್ಕಿ ಮೂಟೆಗಳನ್ನು ತಾಲೂಕು ಆಹಾರ ನಿರೀಕ್ಷಕ ಎಸ್.ಐ. ಸೂಡಿ, ತಹಸೀಲ್ದಾರ್ ವಿಜಯಕುಮಾರ ಕಡಕೋಳ, ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ ವಶಕ್ಕೆ ಪಡೆದುಕೊಂಡರು.
Published on

ಪ್ರಮುಖ ಮುಖ್ಯಾಂಶಗಳು

  • ಖಚಿತ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿದ ಅಧಿಕಾರಿಗಳು
  • ಅಕ್ಕಿ ಸಂಗ್ರಹಿಸುವ ಯುವಕ ಪಡೆ
ತೇರದಾಳ: ಪಟ್ಟಣದ ಸಿದ್ಧೇಶ್ವರ ಗಲ್ಲಿಯ ಸಿದ್ಧೇಶ್ವರ ದೇವಸ್ಥಾನ ಬಳಿಯ ಬಯಲು ಜಾಗೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಮೂಟೆಗಳನ್ನು ಸಂಗ್ರಹಿಸುತ್ತಿರುವ ಕುರಿತಂತೆ ಆಹಾರ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಗುರುವಾರ ಸ್ಥಳಕ್ಕೆ ಆಗಮಿಸಿ, ಅಕ್ಕಿ ಮೂಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಾಗರಿಕರಿಗೆ ವಿತರಿಸಲಾಗುತ್ತಿರುವ ರೇಷನ್ ಅಕ್ಕಿ ಇರಬಹುದೆಂದು ಗುರುತಿಸಲಾದ 12 ಮೂಟೆಗಳಲ್ಲಿ ಅಕ್ಕಿ ಇರುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಂಡು ಮೂಟೆಗೆ ಸಂಬಂಧಿಸಿದ ವ್ಯಕ್ತಿಗಳು ಯಾರಾದರೂ ಬರುತ್ತಾರಾ? ಎಂದು ಹಲವು ಸಮಯದವರೆಗೆ ಆಹಾರ ನಿರೀಕ್ಷಣಾಧಿಕಾರಿ ಎಸ್.ಐ. ಸೂಡಿ ಕಾಯ್ದರು, ಯಾರೂ ಬಾರದೆ ಇರುವುದಕ್ಕೆ ಅಕ್ಕಿ ವಶಕ್ಕೆ ಪಡೆದುಕೊಂಡಿದ್ದಾರೆ.
ಸ್ಥಳಕ್ಕೆ ತಹಸೀಲ್ದಾರ್‌ವಿಜಯಕುಮಾರ ಕಡಕೋಳ, ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ ಭೇಟಿ ನೀಡಿ, ಪರಿಶೀಲಿಸಿದರು.

ಮನೆ ಮನೆಯಲ್ಲಿ ಅಕ್ಕಿ ತುಂಬುವ ಜಾಲ

ನ್ಯಾಯಬೆಲೆ ಅಂಗಡಿಗಳಿಂದ ಬರುತ್ತಿರುವ ಅಕ್ಕಿಯನ್ನು ಪ್ರತಿ ಕೆಜಿಗೆ ಅಂದಾಜು ಹದಿನೈದು ಮತ್ತು ಅದಕ್ಕೂ ಹೆಚ್ಚಿನ ರೂಪಾಯಿಗಳಿಗೆ ಕೊಂಡುಕೊಳ್ಳುವ ಯುವಕರ ಗುಂಪು ನಿರಂತರವಾಗಿ ಅಕ್ರಮವಾಗಿ ಅಕ್ಕಿ ಖರೀದಿಸುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿಯೇ ಕೇಳಿಬರುತ್ತಿದ್ದವು. ಈ ಹಿನ್ನೆಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರು.
"

ಸಿದ್ಧೇಶ್ವರ ದೇವಸ್ಥಾನ ಬಳಿ ಅಕ್ರಮ ಅಕ್ಕಿ ಮೂಟೆಗಳಿರುವ ಖಚಿತ ಮಾಹಿತಿ ಮೇರೆಗೆ ಆಗಮಿಸಿದ್ದು, 12 ಮೂಟೆಗಳಿದ್ದು, ಯಾವ ವ್ಯಕ್ತಿ ಸುಳಿವಿರಲಿಲ್ಲ. ತೇರದಾಳ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಅಕ್ಕಿ ಕುರಿತಂತೆ ದಾಖಲಾಗುವ ಮೊದಲ ಪ್ರಕರಣ ಇದಾಗಿದೆ.

— | ಎಸ್.ಐ. ಸೂಡಿ, ಆಹಾರ ನಿರೀಕ್ಷಕರು, ತೇರದಾಳ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net