ನ್ಯಾಯಾಲಯದ ಆದೇಶದ ಹಿನ್ನೆಲೆ ಸಿಐಡಿ ಅಧಿಕಾರಿಗಳು ಕಳೆದ ಏಪ್ರಿಲ್ ತಿಂಗಳಿನಿಂದ ಮರು ವಿಚಾರಣೆ ನಡೆಸುತ್ತಿದ್ದಾರೆ. ಗಲಾಟೆ ಪ್ರಕರಣದ ಕುರಿತು ಇದು ಸಿಐಡಿ ತಂಡದ 3ನೇ ವಿಚಾರಣೆಯಾಗಿದೆ. ಕಳೆದ ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ ಪುರಸಭೆ ಸದಸ್ಯರು, ಶಾಸಕರು, ಪೊಲೀಸ್ ಸಿಬ್ಬಂದಿ, ವೈದ್ಯರು, ಛಾಯಾಗ್ರಾಹಕರು, ಉಭಯ ಪಕ್ಷಗಳು ಮುಖಂಡರು ಸೇರಿ ಹಲವರ ವಿಚಾರಣೆ ನಡೆಸಿದ್ದಾರೆ. ಪ್ರಕರಣ ಅಂತಿಮ ಹಂತದ ವಿಚಾರಣೆಗಾಗಿ ಸಿಐಡಿ ಅಧಿಕಾರಿಗಳು ಗುರುವಾರ ಪುರಸಭೆಗೆ ಆಗಮಿಸಿ ಸದಸ್ಯ ಚಾಂದನಿ ನಾಯಕ ಅವರಿಂದ ಘಟನಾ ಸ್ಥಳದ ಮಹಜರು ನಡೆಸಿದರು.