ಕ್ರೀಡಾ ಶಾಲೆಗೆ ಆಯ್ಕೆ ಪ್ರಕ್ರಿಯೆ

SPORTS
Published on

ಬಾಗಲಕೋಟೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2021-22ನೇ ಸಾಲಿಗಾಗಿ ರಾಜ್ಯದ ಕ್ರೀಡಾ ಶಾಲೆ ಮತ್ತು ವಸತಿ ನಿಲಯಗಳಿಗೆ ಕಿರಿಯರ ಮತ್ತು ಹಿರಿಯರ ವಿಭಾಗದಲ್ಲಿ ಅಥ್ಲೇಟಿಕ್ಸ್, ಹಾಕಿ, ಬಾಸ್ಕೇಟ್‌ಬಾಲ್, ಈಜು, ಕಬಡ್ಡಿ, ಜಿಮ್ನಾಸ್ಟಿಕ್ ಮಾಲಿಬಾಲ್, ಫುಟ್‌ಬಾಲ್, ಜುಡೋ, ಕುಸ್ತಿ ಮತ್ತು ಸೈಕ್ಲಿಂಗ್ ಕ್ರೀಡೆಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ.

ಡಿ.23 ರಂದು ಬೆಳಗ್ಗೆ 10 ಗಂಟೆಗೆ ಜಮಖಂಡಿ ಮತ್ತು ಹುನಗುಂದ ತಾಲೂಕಾ ಕ್ರೀಡಾಂಗಣ, ಡಿ.24 ರಂದು ಮುಧೋಳ ರನ್ನ ಕ್ರೀಡಾಂಗಣ, ಗುಳೇದಗುಡ್ಡದ ಸರಕಾರಿ ಪದವಿ ಪೂರ್ವ ಕಾಲೇಜು, ಡಿ.26 ರಂದು ಬಾದಾಮಿ ವೀರಪುಲಿಕೇಶಿ ಶಿಕ್ಷಣ ಸಂಸ್ಥೆ ಮೈದಾನ, 28 ರಂದು ಬೀಳಗಿ ತಾಲೂಕಾ ಕ್ರೀಡಾಂಗಣ ಮತ್ತು ಡಿ.29 ರಂದು ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಜಿಲ್ಲಾ ಮಟ್ಟದ ರಾಜ್ಯದ ಕ್ರೀಡಾ ವಸತಿ ನಿಲಯಗಳಿಗೆ ಕಿರಿಯರ ಮತ್ತು ಹಿರಿಯರ ವಿಭಾಗದಲ್ಲಿ ಬಾಲಕ, ಬಾಲಕಿಯರ ದೈಹಿಕ ಪರೀಕ್ಷೆಯನ್ನು ಡಿ.31 ರಂದು ಬೆಳಗ್ಗೆ 9 ಗಂಟೆಗೆ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿದೆ. ತರಬೇತಿದಾರರಾದ ಜಿನ್ನಪ್ಪ ಆಲಗೂರ (9448986462), ಅನಿತಾ ನಿಂಬರಗಿ (9449959064) ಇವರಿಗೆ ನಿಯಮಾನುಸಾರ ಆಯ್ಕೆ ಪ್ರಕ್ರಿಯೆ ಕ್ರಮಕೈಗೊಳ್ಳಲು ತಿಳಿಸಲಾಗಿದೆ ಎಂದು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂಸಂ.9945284771, 9449959064, 9448986462ಗೆ ಸಂಪರ್ಕಿಸಬಹುದಾಗಿದೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net