ಸಂಕಷ್ಟ ಸಮಯದಲ್ಲಿ ಸ್ಪಂದಿಸಿ

BKT 311
Published on

ಬಾಗಲಕೋಟೆ: ಯುವ ಕಾಂಗ್ರೆಸ್ ಬಾಗಲಕೋಟೆ ನಗರ ಘಟಕ ವತಿಯಿಂದ ಕೋವಿಡ್ ಸೋಂಕಿತರಿಗೆ ಉಚಿತ ಆಂಬುಲೆನ್ಸ್ ಸೇವೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ ಸೋಮವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಜನರು ಪರದಾಡುವಂತಾಗಿದೆ. ಈ ವೇಳೆ ಸಹಾಯ ಹಸ್ತ ಚಾಚುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಯುವ ಕಾಂಗ್ರೆಸ್ ಕಾರ್ಯಕರ್ತರು ಜನರ ಕಷ್ಟಕ್ಕೆ ಸ್ಪಂದಿಸಿರುವುದು ಮಾದರಿಯಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಾಜಿ ಶಾಸಕರಾದ ಎಚ್.ವೈ.ಮೇಟಿ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಜಾಲವಾದಿ, ಯುವ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ವಿಜಯಕುಮಾರ ಮುಚಖಂಡಿ, ಜಿಲ್ಲಾ ಮಾಧ್ಯಮ ವಕ್ತಾರ ನಾಗರಾಜ ಹದ್ಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎನ್.ರಾಂಪೂರ, ಮುಖಂಡರಾದ ಮಹ್ಮದ ಮೋತಿವಾಲೆ, ಚಂದ್ರಶೇಖರ ರಾಠೋಡ ಇತರರು ಇದ್ದರು.

ಯುವ ಕಾಂಗ್ರೆಸ್ ಆರಂಭಿಸಿರುವ ಉಚಿತ ಆಂಬುಲೆನ್ಸ್ ಸೇವೆ ಪಡೆದುಕೊಳ್ಳಲು ಬಯಸುವ ಸಾರ್ವಜನಿಕರು ಮೊ. 9632705488, 9611082678, 8050702118 ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net