ಮಹಿಳೆ ಸಾವು, ಕೊಲೆ ಶಂಕೆ?

Crime
Published on

ಬಾಗಲಕೋಟೆ: ಇಲ್ಲಿನ ವಿದ್ಯಾಗಿರಿಯ 4ನೇ ಕ್ರಾಸ್‌ನಲ್ಲಿ ಶುಕ್ರವಾರ ಬೆಳಗಿನ ಜಾವ ಮಹಿಳೆಯೊಬ್ಬರು ಸಾವನ್ನಪ್ಪಿರುವುದ್ದು, ಸಾವಿನ ಬಗ್ಗೆ ಶಂಕೆ ವ್ಯಕ್ತವಾಗಿದೆ.

ವಿದ್ಯಾಗಿರಿಯ ನಿವಾಸಿ ಕಾಶಿಬಾಯಿ ಕದಾಂಪುರ (65) ಮೃತ ಮಹಿಳೆ. ಸದಾ ಕುಡಿದು ನಶೆಯಲ್ಲಿ ಇರುತ್ತಿದ್ದ ಮಗ ರವಿ, ಕುಡಿಯಬೇಡ ಎಂದು ತಾಯಿ ಹೇಳಿದ್ದಕ್ಕೆ ನಿನ್ನೆ ರಾತ್ರಿ ವಾಗ್ವಾದ ಮಾಡಿದ್ದ ಎನ್ನಲಾಗಿದೆ. ಶವದ ಮುಂದೆ ಕೂತು ಪುತ್ರ ರೋದಿಸುತ್ತಿದ್ದ. ಆದರೆ, ಇದು ಮೊಸಳೆ ಕಣ್ಣೀರು ಎನ್ನುವ ಮಾತುಗಳು ಕೇಳಿ ಬಂದಿವೆ.

ಇನ್ನು ಮೃತ ಮಹಿಳೆಯ ಕತ್ತಿನಲ್ಲಿ ಬಿಗಿದಿರುವ ಕಲೆಗಳು ಗೋಚರಿಸಿದ್ದು, ನವನಗರ ಪೊಲೀಸರು ಅನುಮಾನಗೊಂಡಿದ್ದಾರೆ. ನೆರೆಹೊರೆಯವರ ಮೂಲಕ ಪುತ್ರನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ವಿದ್ಯಾಗಿರಿಯ ಕಾಶಿಬಾಯಿ ಅವರ ಸಾವನ್ನಪ್ಪಿದ್ದು, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಬಂದ ಮೇಲೆ ಸಾವಿನ ಬಗ್ಗೆ ಗೊತ್ತಾಗುತ್ತದೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆದಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆ ಮಾಡಿದ್ದಾ? ಕೊಲೆ ಆಗಿದ್ದರೆ ಯಾರು ಮಾಡಿದ್ದು ಎನ್ನುವುದು ಎಲ್ಲವೂ ತನಿಖೆಯಿಂದ ಗೊತ್ತಾಗಲಿದೆ.
- ಲೋಕೇಶ ಜಗಲಾಸರ್ ಎಸ್ಪಿ, ಬಾಗಲಕೋಟೆ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net