

ಬಾಗಲಕೋಟೆ: ಕೋಟೆನಗರಿಯಲ್ಲಿ ಗ್ಲೋಬಲ್ ಮಧ್ವ ಮತ ವೆಲ್‌ೇರ್, ಆನಂದತೀರ್ಥ ಸಮಿತಿ ಜಂಟಿಯಾಗಿ ಭಾನುವಾರ ಹಮ್ಮಿಕೊಂಡಿದ್ದ ವಾಕ್‌ಥಾನ್ ಸಾರ್ವಜನಿಕರಲ್ಲಿ ಆರೋಗ್ಯ ಭಾಗ್ಯದ ಸಂದೇಶ ಸಾರುವಲ್ಲಿ ಯಶಸ್ವಿಯಾಯಿತು.
ನಗರದ ಬಿಜ್ಜರಗಿ ಮೋಟರ್ಸ್‌ದಿಂದ ಸೀತಾರಾಮ ಕಲ್ಯಾಣಮಂಟಪದವರೆಗೆ ನಡೆದ ವಾಕ್‌ಥಾನ್‌ನಲ್ಲಿ ನೂರಾರು ಜನ ಭಾಗವಹಿಸಿದ್ದರು. ಬೆಳ್ಳಂಬೆಳಿಗ್ಗೆ ಚುಮುಚುಮು ಚಳಿ, ಮಂಜು ಮುಸುಕಿದ ವಾತಾವರಣದಲ್ಲಿ ಹಿರಿಯರು, ಕಿರಿಯರು, ಮಕ್ಕಳು ಹೆಜ್ಜೆ ಹಾಕಿದರು. ಮಹಾಮಾರಿ ಕೋವಿಡ್‌ಗೆ ಆತಂಕ ಪಡೆಬೇಕಿಲ್ಲ. ಜಾಗೃತರಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಲಾಯಿತು.
ಪಂಡಿತರಾದ ಶ್ರೀನಿವಾಸಾಚಾರ್ಯ ಪಾಂಡುರಂಗಿ, ವಿಜಯೀಂದ್ರಾಚಾರ್ಯ ಯತ್ನಟ್ಟಿ, ಪ್ರಮೋದಾಚಾರ್ಯ ಆಲೂರ, ವಿಪ್ರ ಹಿರಿಯರಾದ ಶ್ರೀನಾಥ ಮಳಗಿ, ಬುಡಾ ಸದಸ್ಯ ಜಯಂತ ಕುರಂದವಾಡ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ರಾಘವೇಂದ್ರ ಪುರೋಹಿತ, ಶಶಿ ದೇವಳೆ, ದಯಾನಂದ ಕುಲಕರ್ಣಿ, ಎಸ್.ವಿ.ದೇಸಾಯಿ ಜಂಟಿಯಾಗಿ ವಾಕ್‌ಥಾನ್‌ಗೆ ಚಾಲನೆ ನೀಡಿದರು.
ಗ್ಲೋಬಲ್ ಮಧ್ವ ಮತ ವೆಲ್‌ೇರ್ ಅಧ್ಯಕ್ಷ ವಿನಾಯಕ ದೇಸಾಯಿ,ಪ್ರಧಾನ ಕಾರ್ಯದರ್ಶಿ ಭಾಸ್ಕರ ಮನಗೂಳಿ, ಮುಖಂಡರಾದ ಪವನ ಸಿಮಿಕೇರಿ,ಶಶಿ ದೇಶಪಾಂಡೆ, ವಿನೋದ ನರಸಾಪುರ, ಪಾಂಡು ಹೊಸೂರ, ಶ್ರೀಹರಿ ಡಂಬಳ, ಸಮೀರ ಕಾವೇರಿ, ಕಿಶೋರ ಸಿದ್ದಾಂತಿ, ಕಿರಣ ಕುಲಕರ್ಣಿ, ಬಂಡು ಸರದೇಸಾಯಿ, ಆದಿತ್ಯ ಮನಗೂಳಿ, ಅಜಯ ಸುಳಿಕೇರಿ,ಭರತ ಆಲೂರ, ಗುರುರಾಜ ಜೋಶಿ, ಆದಿತ್ಯ ಮಳಗಿ, ಮುಕುಂದ ಮನಗೂಳಿ, ರೇಖಾ ಮಳಗಿ, ಸಂಜನಾ ದೇಶಪಾಂಡೆ, ಶ್ವೇತಾ ಕುಲಕರ್ಣಿ ಸೇರಿದಂತೆ ಇತರರು ಇದ್ದರು.
EndFragment