ಎರಡು ಪಿಕೆಪಿಎಸ್‌ಗೆ ಮರು ಸಭೆ

Vijayanand Kashappanavar
Published on

ಬಾಗಲಕೋಟೆ: ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ಮತಾಧಿಕಾರದ ಡೆಲಿಗೇಷನ್ ಪಾವರ್ ಕುರಿತು ಹುನಗುಂದ ತಾಲೂಕಿನ ಎರಡು ಪಿಕೆಪಿಎಸ್‌ಗಳಿಗೆ ಮರು ಸಭೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದ್ದಾರೆ.

ಹುನಗುಂದ ಪಿಕೆಪಿಎಸ್ ಕ್ಷೇತ್ರದಲ್ಲಿ ನನ್ನನ್ನು ಸೋಲಿಸುವ ಉದ್ದೇಶದಿಂದ ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಂಡಿತ್ತು. ಡಿಸಿಎಂ ಗೋವಿಂದ ಕಾರಜೋಳ ಹಾಗೂ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಏನೆಲ್ಲ ಪ್ರಯತ್ನ ಮಾಡಿದ್ದರು ಎಂದು ಸುದ್ದಿಗಾರರ ಎದುರು ಆರೋಪಿಸಿದರು.

ಡಿಸಿಸಿ ಬ್ಯಾಂಕ್ ನಿಯಮಾವಳಿ ಬದಿಗೊತ್ತಿ ಹುನಗುಂದ ಬಿಜೆಪಿ ತನ್ನ ಅಧಿಕಾರ ಬಳಕೆ ಮಾಡಿಕೊಂಡು ಅಧಿಕಾರಿಗಳನ್ನು ಒತ್ತಡ ಹಾಕಿ ತಾಲೂಕಿನ ಘಟ್ಟಿಗನೂರು ಹಾಗೂ ಸೂಳಿಭಾವಿ ಆ ಎರಡು ಪಿಕೆಪಿಎಸ್‌ಗಳಿಗೆ ಮೇಲ್ವಿಚಾರಕರನ್ನು ಬದಲಿಸಿ ಜಿಲ್ಲಾ ಸಹಕಾರಿ ಉಪ ನಿಬಂಧಕರನ್ನು ಎಂಡಿ ಅಂತ ಅಧಿಕಾರ ಕೊಟ್ಟರು. ಇದರಿಂದ ತಮಗೆ ಬೇಕಾದ ಮೇಲ್ವಿಚಾರ ಕರನ್ನು ನೇಮಿಸಿ, ನನ್ನ ಪರವಾಗಿ ಸಿಗಬೇಕಿದ್ದ ಮತಾಧಿಕಾರದ ಡೆಲಿಗೇಷನ್ ಪಾವರ್ ಬಿಜೆಪಿ ಬೆಂಬಲಿತರಿಗೆ ಸಿಗುವಂತೆ ನೋಡಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಇದ್ದಿದ್ದರಿಂದ ನಾವು ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೊರೆ ಹೋಗಿದ್ದೇವು. ನ್ಯಾಯಾಲಯದ ಮಧ್ಯಂತರ ತೀರ್ಪು ಬಂದಿದ್ದು, ನಮಗೆ ನ್ಯಾಯ ಸಿಕ್ಕಿದೆ. ಇದೀಗ ಹಿಂದೆ ಆಡಳಿತ ಮಂಡಳಿ ನೇಮಕ ಮಾಡಿದ್ದ ಮೇಲ್ವಿಚಾರಕರ ನೇತೃತ್ವದಲ್ಲಿ ಮತ್ತೊಮ್ಮೆ ಸಭೆ ನಡೆಸಿ, ಮತಾಧಿಕಾರದ ಡೆಲಿಗೇಷನ್ ಪಾವರ್ ಯಾರಿಗೆ ಎನ್ನುವುದು ನಿಗದಿ ಪಡಿಸಬೇಕಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net