

ಬಾಗಲಕೋಟೆ: ಪ್ರತಿಯೊಂದು ಕಾಮಗಾರಿ ಗುಣಮುಟ್ಟದಿಂದ ಕೂಡಿರಬೇಕು. ಜತೆಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಶಾಸಕ ವೀರಣ್ಣ ಚರಂತಿಮಠ ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭೆಯ ವಿವಿಧ ವಾರ್ಡ್‌ಗಳಲ್ಲಿ 15ನೇ ಹಣಕಾಸು ಯೋಜನೆಯಡಿ ಒಟ್ಟು 7 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ನವನಗರದ ಸೆಕ್ಟರ್ ನಂ.10ರಲ್ಲಿ 73 ಲಕ್ಷ ರೂ. ಕಾಮಗಾರಿ, ನವನಗರದ ವಾಂಬೆ ಕಾಲನಿಯಲ್ಲಿ 77.7 ಲಕ್ಷ ರೂ., ವಿದ್ಯಾಗಿರಿಯ 19, 20ನೇ ಮುಖ್ಯ ರಸ್ತೆ ವಾರ್ಡ್ ನಂ.33ರಲ್ಲಿ 36 ಲಕ್ಷ ರೂ., ವಿದ್ಯಾಗಿರಿಯ ಜ್ಯೋತಿ ಕಾಲನಿಯ ವಾರ್ಡ್ ನಂ.19 ರಲ್ಲಿ 25 ಲಕ್ಷ ರೂ., ವಿನಾಯಕ ನಗರದ ವಾರ್ಡ್ ನಂ.3 ರಲ್ಲಿ 74.48 ಲಕ್ಷ ರೂ., ಶುದ್ಧ ಕುಡಿಯುವ ನೀರಿನ ಶೆಡ್ ನಿರ್ಮಾಣ, ಉದ್ಯಾನ ಅಭಿವೃದ್ಧಿ ಸೇರಿ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹಳಪೇಟೆ ಹನುಮಪ್ಪನ ಗುಡಿಯ ಹತ್ತಿರ ವಾರ್ಡ್ ನಂ.7ರಲ್ಲಿ 51.25 ಲಕ್ಷ ರೂ., ಲಕ್ಷ್ಮೀ ಗುಡಿ ಹತ್ತಿರ ಹಳೇ ಡೆಂಟಲ್ ಕಾಲೇಜು ವಾರ್ಡ್ ನಂ.9ರಲ್ಲಿ 44.4 ಲಕ್ಷ ರೂ. ಕಾಮಗಾರಿ, ಕೋತ್ತಲೇಶ್ವರ ಗುಡಿ ಹಿಂದುಗಡೆ ವಾರ್ಡ್ ನಂ.14 ರಲ್ಲಿ 96.1 ಲಕ್ಷ ರೂ. ಕಾಮಗಾರಿ, ವೀರಭದ್ರೇಶ್ವರ ಗುಡಿ ಮುಚಖಂಡಿ ಕ್ರಾಸ್ ಹತ್ತಿರ 45 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ನಿರ್ಮಾಣ, ಪೈಪ್‌ಲೈನ್ ಅಳವಡಿಕೆ, ಬೀದಿ ದೀಪ ಅಳವಡಿಕೆ, ಸಿಸಿ ರಸ್ತೆ ಸೇರಿ ಅನೇಕ ಕಾಮಗಾರಿ ಆರಂಭಿಸಲಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಸದಸ್ಯರಾದ ಶೋಭಾ ವೆಂಕಟೇಶರಾವ್, ಅನೀಲ ಅಕ್ಕಿಮರಡಿ, ಮುತ್ತಪ್ಪ ಸೂಳಿಕೇರಿ, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಗುತ್ತಿಗೆದಾರ ರವಿ ಆಲೂರ, ಸಾಗರ್ ವೈದ್ಯ, ಎಸ್.ಎಚ್.ಕಟಾರೆ, ಬಸವರಾಜ ಹೊನ್ನಳ್ಳಿ, ವೆಂಕಟೇಶ ಹಂದ್ರಾಳ, ಮಂಜು ಸಿಂದಗಿ, ಹನುಮಂತ ತೆಗ್ಗಿ ಇತರರು ಉಪಸ್ಥಿತರಿದ್ದರು.
EndFragment