ಟ್ರಾೃಕ್ಟರ್ ಪಲ್ಟಿ ಇಬ್ಬರ ಸಾವು

BKT 225
Published on

ಬಾಗಲಕೋಟೆ: ಟ್ರಾೃಕ್ಟರ್ ಪಲ್ಟಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಇಳಕಲ್ಲ ಸಮೀಪದ ತುಂಬ ಕ್ರಾಸ್ ಬಳಿ ಭಾನುವಾರ ತಡರಾತ್ರಿ ನಡೆದಿದೆ.
ಶಿವಕುಮಾರ ಕಿಡದೂರ(30), ಪ್ರಭುಸ್ವಾಮಿ ಹೊಸಮಠ (40) ಮೃತ ದುರ್ದೈವಿಗಳು. ರಾಯಚೂರ ಜಿಲ್ಲೆಯ ಸಿಂಧನೂರ ನಗರ ನಿವಾಸಿಗಳಾಗಿದ್ದಾರೆ. ಸಿಂಧನೂರ ನಗರದಿಂದ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮಕ್ಕೆ ಆಗಮಿಸುತ್ತಿದ್ದ ವೇಳೆ ರಾತ್ರಿ ವಿದ್ಯುತ್ ಕಂಬಕ್ಕೆ ಟ್ರಾೃಕ್ಟರ್ ಡಿಕ್ಕಿ ಹೊಡೆದ ಪಲ್ಟಿಯಾಗಿದೆ. ಟ್ರಾೃಕ್ಟರ್‌ನಲ್ಲಿದ್ದ ವಿದ್ಯುತ್ ಕಂಬಗಳು ಈ ಇಬ್ಬರ ಮೇಲೆ ಬಿದ್ದ ಕಾರಣ ಸ್ಥಳದಲ್ಲಿಯೆ ಸಾವನ್ನಪ್ಪಿದ್ದಾರೆ. ಇಳಕಲ್ಲ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net