ನಾಳೆಯಿಂದ ಮೀಸಲಾತಿ ನಿಗದಿ ಪ್ರಕ್ರಿಯೆ

captain dr k rajendra
Published on

ಬಾಗಲಕೋಟೆ: ರಾಜ್ಯ ಚುನಾವಣೆ ಆಯೋಗದ ನಿರ್ದೇಶನದಂತೆ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿಪಡಿಸಲು ಚುನಾಯಿತ ಸದಸ್ಯರ ಸಮ್ಮುಖದಲ್ಲಿ ಆಯಾ ತಾಲೂಕು ಕೇಂದ್ರಗಳಲ್ಲಿ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ತಿಳಿಸಿದ್ದಾರೆ.

ಜ. 15 ರಂದು ಬೆಳಗ್ಗೆ 10 ಗಂಟೆಗೆ ಗುಳೇದಗುಡ್ಡದ ಭಂಡಾರಿ ಮತ್ತು ರಾಠಿ ಕಾಲೇಜಿನ ಸಾಂಸ್ಕೃತಿಕ ಭವನ ಮತ್ತು ಮಧ್ಯಾಹ್ನ 3 ಗಂಟೆಗೆ ಬಾದಾಮಿ ವೀರಪುಲಕೇಶಿ ವಿದ್ಯಾವರ್ಧಕ ಸಂಸ್ಥೆ ಒಳಾಂಗಣ ಕ್ರೀಡಾಂಗಣ (ಬಸವ ಮಂಟಪ), ಜ.17 ರಂದು ಮಧ್ಯಾಹ್ನ 4 ಗಂಟೆಗೆ ಬಾಗಲಕೋಟೆ ಇಂಜಿನಿಯರಿಂಗ್ ಕಾಲೇಜು ರಸ್ತೆ, ಗೌರಿಶಂಕರ ಕಲ್ಯಾಣ ಮಂಟಪ, ಜ.18 ರಂದು ಬೆಳಗ್ಗೆ 9 ಗಂಟೆಗೆ ಬನಹಟ್ಟಿ ಬಿದರಿ ಕಲ್ಯಾಣ ಮಂಟಪದಲ್ಲಿ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಸಲಾಗುತ್ತಿದೆ.

ಜ.18 ರಂದು ಮಧ್ಯಾಹ್ನ 1 ಗಂಟೆಗೆ ಜಮಖಂಡಿಯ ಹೇಮರೆಡ್ಡಿ ಕಲ್ಯಾಣ ಮಂಟಪ, ಜ.19 ರಂದು ಬೆಳಗ್ಗೆ 9 ಗಂಟೆಗೆ ಹುನಗುಂದದ ಗುರುಭವನ, ಮಧ್ಯಾಹ್ನ 1ಗಂಟೆಗೆ ಇಳಕಲ್ಲ ಕಂಠಿ ಸರ್ಕಲ್ ಹತ್ತಿರದ ಅನುಭವ ಮಂಟಪ, ಜ.21 ರಂದು ಮಧ್ಯಾಹ್ನ 12 ಗಂಟೆಗೆ ಬೀಳಗಿ ಹೊಸ ಕೊರ್ತಿಯ ಸಮುದಾಯ ಭವನ ಮತ್ತು ಮಧ್ಯಾಹ್ನ 4 ಗಂಟೆಗೆ ಮುಧೋಳ ರನ್ನ ಭವನದಲ್ಲಿ ಮೀಸಲಾಗಿ ನಿಗದಿ ಪ್ರಕ್ರಿಯೆ ನಡೆಸಲಾಗುತ್ತಿದೆ.

ಈ ದಿನಗಳಂದು ಆಯಾ ತಾಲೂಕಿನ ಗ್ರಾಪಂ ನೂತನ ಚುನಾಯಿತ ಸದಸ್ಯರು ಹಾಜರಿರಬೇಕು. ಕೋವಿಡ್-19 ಹಿನ್ನೆಲೆಯಲ್ಲಿ ಪರಸ್ಪರ ಅಂತರ ಹಾಗೂ ಸೂಕ್ತ ಮುಂಜಾಗ್ರತೆ ಕ್ರಮವಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net