ಅವಸಾನದಂಚಿನಲ್ಲಿರುವ ಅಪರೂಪದ ನಕ್ಷತ್ರ ಆಮೆ ಕೆರೂರ ಪಟ್ಟಣದಲ್ಲಿ ಪತ್ತೆ

28103776-97cd-48d8-a4c5-daf662ec0c71
Published on

ಬಾಗಲಕೋಟೆ: ಅವಸಾನದ ಅಂಚಿನಲ್ಲಿ ಇರುವ ಅಪರೂಪದ ನಕ್ಷತ್ರ ಆಮೆಯೊಂದು ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ಜಮೀನೊಂದರಲ್ಲಿ ಪತ್ತೆ ಆಗಿದೆ. ಬಯಲುಸೀಮೆಯಲ್ಲಿ ಈ ಆಮೆ ಕಂಡು ಬರುತ್ತದೆಯಾದರೂ ಇತ್ತೀಚಿನ ವರ್ಷಗಳಲ್ಲಿ ಇದು ಅಳಿವಿನಂಚಿನಲ್ಲಿದೆ.

ಇಂಡಿಯನ್ ಸ್ಟಾರ್ ಟಾರ್ಟೈಸ್ ಅವಸಾನದಂಚಿನಲ್ಲಿ ಇದೆ. ನೋಡಲು ಕಲ್ಲಿನಂತೆ ಇದ್ದು, ಕಲ್ಲುಗಳ ಪಕ್ಕ ಇದ್ದರೆ ಇದನ್ನು ಗುರುತಿಸುವುದು ಬಹಳ ಕಷ್ಟ. ಕೆರೂರ ಭಾಗದಲ್ಲಿ ಇದೀಗ ಆಮೆ ಪತ್ತೆ ಆಗಿದ್ದರಿಂದ ಈ ಭಾಗದ ಅರಣ್ಯ ಪ್ರದೇಶದಲ್ಲಿ ಇದರ ಸಂತತಿ ಇರಬಹುದು. ಅಳುವಿನಂಚಿನಲ್ಲಿ ಇರುವ ಈ ನಕ್ಷತ್ರ ಆಮೆ ಸಂತತಿ ಬೆಳೆಯಲಿ ಎನ್ನುವ ಹಿರಿಯ ಅಧಿಕಾರಿಗಳ ಸಲಹೆ ಮೇರಿಗೆ ನಮ್ಮ ಭಾಗದ ಸುರಕ್ಷಿತ ಪ್ರದೇಶದ ಕಾಡಿನಲ್ಲಿ ಬಿಟ್ಟು ಬರಲಾಗಿದೆ ಎಂದು ಬಾದಾಮಿ ವಲಯ ಅರಣ್ಯ ಅಧಿಕಾರಿ ಪಿ.ಎಸ್.ಖೇಡಗಿ ತಿಳಿಸಿದ್ದಾರೆ.

ಅಂದ ಹಾಗೆ ಇದು ಪತ್ತೆಯಾಗಿರುವುದು ಕೆರೂರ ಪಟ್ಡಣದ ಬಳಿ ಸಹಾಯಕ ಕೃಷಿ ಅಧಿಕಾರಿ ಶಂಕರ ನಾಯಕ್ ಅವರ ಜಮೀನಿನಲ್ಲಿ. ಶಂಕರ ನಾಯಕ್ ಅವರು ನಕ್ಷತ್ರ ಆಮೆಯನ್ನು ಬಾದಾಮಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶುಕ್ರವಾರ ಹಸ್ತಾಂತರಿಸಿದ್ದಾರೆ. ಬಾದಾಮಿ ವಲಯ ಅರಣ್ಯ ಅಧಿಕಾರಿ ಪಿ.ಎಸ್. ಖೇಡಗಿ ಹಾಗೂ ಸಿಬ್ಬಂದಿ ಆಮೆ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಕಾಡಿಗೆ ಹೋಗಿ ಬಿಟ್ಟು ಬಂದಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net