ಬಾಗಲಕೋಟೆ, ದಕ್ಷಿಣ ಕನ್ನಡ ಜಿಲ್ಲೆಗೆ ಗೆಲುವಿನ ಪಾಲು

kldg 21-1 malla
ಬಾಗಲಕೋಟೆ ಜಿಲ್ಲೆ ಕಲಾದಗಿ ಸಮೀಪದ ತುಳಸಿಗೇರಿಯಲ್ಲಿ ಬುಧವಾರ ಸಂಜೆ ಮುಕ್ತಾಯವಾದ ರಾಜ್ಯಮಟ್ಟದ ಮಲ್ಲಕಂಬ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಮಲ್ಲಕಂಬ ಪಟುಗಳೊಂದಿಗೆ ಸಂಘಟಕರು, ತರಬೇತುದಾರರು.
Published on

ಕಲಾದಗಿ: ಸಮೀಪದ ತುಳಸಿಗೇರಿಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಜಿಪಂ ಹಾಗೂ ಸ್ಥಳೀಯರ ನೆರವಿನೊಂದಿಗೆ ನ. 18 ರಿಂದ ನಡೆಯುತ್ತಿದ್ದ 14 ಮತ್ತು 17ನೇ ವಯೋಮಿತಿಯ ಬಾಲಕ- ಬಾಲಕಿಯರ ರಾಜ್ಯಮಟ್ಟದ ಮಲ್ಲಕಂಬ ಪಂದ್ಯಾವಳಿಯಲ್ಲಿ ಬಾಗಲಕೋಟೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ರಾಜ್ಯದ 18 ಜಿಲ್ಲೆಗಳ ಶಾಲೆಗಳ 400ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಮಲ್ಲಕಂಬ ಪಟುಗಳ ಎರಡನೇ ಸುತ್ತಿನ ಆಟದ ನಂತರ ರಾಷ್ಟ್ರಮಟ್ಟದ ಮಲ್ಲಕಂಬದ ಪಂದ್ಯಾವಳಿಯಲ್ಲಿ ಆಡಲು ರಾಜ್ಯ ಪ್ರತಿನಿಧಿಸುವ 16 ಜನ ಆಟಗಾರರನ್ನು ಆಯ್ಕೆ ಮಾಡಲಾಯಿತು.

14 ವರ್ಷದ ವಯೋಮಿಯ ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಿರಣ, ಮಲ್ಲಿಕಾರ್ಜುನ, ಬಾಗಲಕೋಟೆ ಜಿಲ್ಲೆಯ ಭಾರತಿ ಹಾಗೂ ವೆಂಕಟೇಶ, 17 ವರ್ಷದ ವಯೋಮಿತಿಯ ಬಾಲಕರ ವಿಭಾಗದಲ್ಲಿ ಬಾಗಲಕೋಟೆ ಜಿಲ್ಲೆಯ ಪವನ, ಮೇಹಬೂಬ,ದಕ್ಷಿಣಕನ್ನಡ ಜಿಲ್ಲೆಯ ಆದಿತ್ಯ ಗಲಾಟಗಿ ಹಾಗೂ ಆಕಾಶ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

14 ವರ್ಷದ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಬಾಗಲಕೋಟೆ ಜಿಲ್ಲೆಯ ಚಿತ್ರಾ ಸಿ., ಅಮೃತಾ, ನಕ್ಷತ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಿಂಚನ ಅವರು ಆಯ್ಕೆಯಾಗಿದ್ದಾರೆ.

17 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಬಾಗಲಕೋಟೆ ಜಿಲ್ಲೆಯ ಶ್ರದ್ಧಾ ದಿವಟಗಿ, ಪದ್ಮಾ ಸೊನ್ನದ, ದಕ್ಷಿಣ ಕನ್ನಡ ಜಿಲ್ಲೆಯ ರಕ್ಷಿತಾ ಹಾಗೂ ಸವಿತಾ ಅವರು ಉನ್ನತ ಪಾಯಿಂಟ್ ಗಳಿಸಿದ್ದಾರೆ.

ಡಿ. 9 ರಿಂದ 13 ರ ವರೆಗೆ ಮಧ್ಯಪ್ರದೇಶದ ಉಜ್ಜಯನಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಮಲ್ಲಕಂಬ ಚಾಂಪಿಯನ್‌ಷಿಪ್‌ನಲ್ಲಿ ಈ ಎಲ್ಲರೂ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net