ಬಾಗಲಕೋಟೆಯ ಜೈಲಿನಲ್ಲಿ ಕರೊನಾ ಸ್ಫೋಟ! 40 ಖೈದಿಗಳಿಗೆ ಸೋಂಕು ದೃಢ

prison
Published on

ಬಾಗಲಕೋಟೆ: ಜಿಲ್ಲೆಯ ಜೈಲಿನಲ್ಲಿ ಕರೊನಾ ಮಹಾಸ್ಫೋಟವಾಗಿದೆ. ಪರೀಕ್ಷೆಗೆ ಒಳಗಾದ 200 ಜನರ ಪೈಕಿ 40 ಜನರಿಗೆ ಸೋಂಕು ದೃಢವಾಗಿದೆ.

ಈ ಹಿಂದೆ ಏಪ್ರಿಲ್​ 24ರಂದು ಓರ್ವ ಖೈದಿಗೆ ಕರೊನಾ ಸೋಂಕು ದೃಢವಾಗಿತ್ತು. ಆ ಹಿನ್ನೆಲೆಯಲ್ಲಿ ಜೈಲಿನ ಸಿಬ್ಬಂದಿ, ವಿಚಾರಣಾಧಿನ ಖೈದಿ ಸೇರಿ ಒಟ್ಟು 200 ಜನರಿಗೆ ಸೋಮವಾರ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ 39 ಮಂದಿಗೆ ಸೋಂಕು ದೃಢವಾಗಿದೆ.

ಸೋಂಕಿಗೆ ತುತ್ತಾಗಿರುವ ಓರ್ವ ಖೈದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಎಲ್ಲ ಖೈದಿಗಳನ್ನು ಜೈಲಿನಲ್ಲೇ ಐಸೋಲೇಶನ್​ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net