ಕ್ಯಾಂಟರ್ ವಾಹನ ಹಾಯ್ದು 10 ಕುರಿಗಳು ಸಾವು

GLD-Kuri Death
Published on

ಬಾಗಲಕೋಟೆ: ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಬೂದಿನಗಡ ಗ್ರಾಮದಲ್ಲಿ ರಸ್ತೆ ಮೇಲೆ ಹೊರಟ್ಟಿದ್ದ ಕುರಿಗಳಿಗೆ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಹತ್ತು ಕುರಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, 20 ಕುರಿಗಳು ಗಂಭೀರವಾಗಿ ಗಾಯಗೊಂಡಿವೆ.

ಬೂದಿನಗಡ ಗ್ರಾಮದ ಸಿದ್ದಪ್ಪ ನಿಂಬಲಗುಂದಿ ಅವರಿಗೆ ಕುರಿಗಳು ಸೇರಿದ್ದು, ಕುಡಿದ ಅಮಲಿನಲ್ಲಿದ್ದ ಚಾಲಕ ವಾಹನವನ್ನು ವೇಗವಾಗಿ ಚಲಾಯಿಸಿದ್ದರಿಂದ ಈ ಘಟನೆ ಸಂಭವಿಸಿದೆ. ವೇಗದಲ್ಲಿದ್ದ ವಾಹನ ನಿಯಂತ್ರಣ ತಪ್ಪಿ ಕುರಿಗಳ ಮೇಲೆ ಹಾಯ್ದಿದ್ದು, ಡಿಕ್ಕಿ ರಭಸಕ್ಕೆ 10 ಕುರಿಗಳು ರಕ್ತಸ್ರಾವದಿಂದ ಮೃತಪಟ್ಟಿವೆ. ಗಾಯಗೊಂಡ ಕುರಿಗಳನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಜೀವನಕ್ಕೆ ಆಸರೆಯಾಗಿದ್ದ ಕುರಿಗಳ ಕಳೆದುಕೊಂಡ ಕುರಿಗಾಹಿ ಸಿದ್ದಪ್ಪನಿಗೆ ದಿಕ್ಕೆ ತೋಚದಂತಾಗಿದೆ.

ಈ ಕುರಿತು ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net