ಸರ್ಕಾರಿ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ

BKT NEWS 23-1
Published on

ಬಾಗಲಕೋಟೆ: ನಗರಸಭೆಯ ಬಯಲು ರಂಗ ಮಂದಿರದ ಆವರಣದಲ್ಲಿ ನಗರಸಭೆಯ ಎಸ್‌ಎ್ಸಿ ಶೇ.5ರ ಅನುದಾನದಡಿ ಒಂಬತ್ತು ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ಶಾಸಕ ವೀರಣ್ಣ ಚರಂತಿಮಠ ಗುರುವಾರ ವಿತರಿಸಿದರು.

ನಂತರ ಮಾತನಾಡಿದ ಅವರು, ಸರ್ಕಾರದ ಸೌಲಭ್ಯಗಳನ್ನು ಅಂಗವಿಕಲರು ಸದುಪಯೋಗ ಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಅಂಗವಿಕಲತೆ ಬಗ್ಗೆ ಕೀಳರಿಮೆ ಹೊಂದಬಾರದು. ವಿಶ್ವದ ಅನೇಕ ಕ್ಷೇತ್ರದಲ್ಲಿ ಅಂಗವಿಕಲರು ವಿಶೇಷ ಸಾಧನೆ ಮಾಡಿದ್ದಾರೆ ಎಂದರು.

ಫಲಾನುಭವಿಗಳಾದ ವಿಜಯಲಕ್ಷ್ಮೀ ಬಡಿಗೇರ, ರಂಗನಾಥ ಕಂಬಾರ, ವಿಠಲ ಅಚ್ಚಲಕರ, ಶಿವಪ್ಪ ಜಾಲಗಾರ, ಗುರುಬಾಯಿ ಹಿರೇಮಠ, ಮನೋಹರ ನರಸಪ್ಪನವರ, ಮೀತಾ ಗಣಾತ್ರಾ, ರೇಣುಕಾ ಲಮಾಣಿ, ಸುರೇಶ ಜೋಶಿ ತ್ರಿಚಕ್ರ ವಾಹನ ಪಡೆದರು.

ನಂತರ ಬಯಲು ಮಂದಿರದ ಆವರಣ ವೀಕ್ಷಿಸಿದ ಶಾಸಕ ವೀರಣ್ಣ ಚರಂತಿಮಠ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಇಲ್ಲಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಸಕಲ ಸೌಲಭ್ಯ ದೊರೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ, ನಗರಸಭೆ ಆಯುಕ್ತ ವಿ.ಮುನಿಶಾಮಪ್ಪ ಸೇರಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net