ಬಾಗಲಕೋಟೆಯ ಗ್ರಾಮ ಒಂದರಲ್ಲಿ ದ್ವೇಷಕ್ಕೆ ಬಲಿಯಾಯಿತೇ ಎರಡು ಎಕರೆ ನಿಂಬೆ ತೋಟ!

BGT Junnuru village lime garden1 6 MAR 20
Published on

ಬಾಗಲಕೋಟೆ: ಮನುಷ್ಯರ ದ್ವೇಷ ಎಷ್ಟರ ಮಟ್ಟಿಗೆ ಹಾನಿ ಎಸಗುತ್ತದೆ ಎಂದರೆ ಕೆಲವೊಮ್ಮೆ ಪ್ರಾಣಕ್ಕೇ ಎರವಾಗುವಷ್ಟರ ಮಟ್ಟಿಗೆ. ಆಹಾರವನ್ನೂ ಬಿಡುವುದಿಲ್ಲ ಆ ದ್ವೇಷ. ಹೌದು, ಬಾಗಲ ಕೋಟೆಯಲ್ಲಿ ಎರಡು ಎಕರೆ ನಿಂಬೆ ತೋಟ ಇಂತಹ ದ್ವೇಷಕ್ಕೆ ಬಲಿಯಾಯಿತೇ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡಿದೆ.

ಎರಡು ಎಕರೆಯಲ್ಲಿ 300 ನಿಂಬೆಗಳ ತೋಟ ಫಸಲು ತುಂಬಿ ನಿಂತಿತ್ತು. ಎಲ್ಲ ಗಿಡಗಳಿಗೂ ಹದಿನೈದು ವರ್ಷಗಳ ಆರೈಕೆ ಸಿಕ್ಕಿದ ಕಾರಣ ಫಸಲು ಕಣ್ತುಂಬುವಂತೆ ಇತ್ತು. ಆದರೆ ಅದನ್ನು ಬೆಳೆದ ರೈತನಿಗೆ ಈ ಸಲ ಉಣ್ಣುವ ಯೋಗ ಸಿಗಲಿಲ್ಲ. ಯಾರದೋ ದ್ವೇಷಕ್ಕೆ ನಿಂಬೆ ಗಿಡಗಳು ಬಲಿಯಾಗಿದ್ದು, ಕೇವಲ ಎರಡು ಮೂರು ದಿನಗಳಲ್ಲೇ ಗಿಡಗಳು ಒಣಗಿ ಫಸಲೂ ಉಪಯೋಗಕ್ಕೆ ಬಾರದಂತಾಗಿವೆ.

ವಿಷಕಾರಿ ಔಷಧವನ್ನು ಹೈಡೋಸ್​ನಲ್ಲಿ ಗಿಡಗಳ ಮೇಲೆ ಸಿಂಪಡಿಸಿದ ಕಾರಣ ಹೀಗಾಗಿದೆ ಎಂಬ ಅನುಮಾನವನ್ನು ಸ್ಥಳಕ್ಕೆ ಭೇಟಿ ನೀಡಿದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ರಾತ್ರೋ ರಾತ್ರಿ ತೋಟಕ್ಕೆ ಔಷಧ ಸಿಂಪಡಿಸಿದವರು ಯಾರು ಎಂಬುದು ಪತ್ತೆಯಾಗಿಲ್ಲ. ಬಾಗಲಕೋಟಿ ಜಿಲ್ಲೆಯ ಮುಧೋಳ ತಾಲೂಕಿನ ಜುನ್ನೂರ ಗ್ರಾಮದಲ್ಲಿ ಈ ಕೃತ್ಯ ನಡೆದಿದ್ದು, ರಾಜುಗೌಡ ಎಂಬುವರಿಗೆ ಸೇರಿದ ನಿಂಬೆ ತೋಟವದು. ವಿಷಕಾರಿ ಔಷಧಕ್ಕೆ 120ಕ್ಕೂ ಹೆಚ್ಚು ಗಿಡಗಳು ನಾಶವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net