

ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ಮುದ್ದಾಪುರದ ಜೆ.ಕೆ. ಸಿಮೆಂಟ್ ವರ್ಕ್ಸಗೆ ಐದು ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಆರ್.ಬಿ.ಎಂ.ತ್ರೀಪಾಠಿ ತಿಳಿಸಿದ್ದಾರೆ.
ಕಾನ್ಫೆಡರೇಶನ್ ಆ್ ಇಂಡಿಯನ್ ಇಂಡಸ್ಟ್ರಿ ನಡೆಸಿದ 21 ನೇಯ ರಾಷ್ಟ್ರೀಯ ಇಂಧನ ನಿರ್ವಹಣಾ ಸ್ಪರ್ಧೆಯಲ್ಲಿ ಶ್ರೇಷ್ಠತೆಗಾಗಿ ಈ ಪ್ರಶಸ್ತಿಗಳು ಲಭಸಿವೆ. ದೇಶದ ಅಟೋಮೊಬೈಲ್, ಸಿಮೆಂಟ್, ಸ್ಟೀಲ್, ಐಟಿ, ಸಕ್ಕರೆ ಮುಂತಾದ ವಲಯದ 375 ಕಂಪೆನಿಗಳು ಭಾಗವಹಿಸಿದ್ದವು. ಇದರಲ್ಲಿ 153 ಕಂಪೆನಿಗೆ ಪ್ರಜಂಟೇಷನ್ ಮಾಡಲು ಅರ್ಹತೆ ಪಡೆದುಕೊಂಡಿದ್ದವು. 21 ಸಿಮೆಂಟ್ ಕಂಪೆನಿಗಳು ಭಾಗವಹಿಸಿದ್ದವು.
ಮುದ್ದಾಪುರದ ಜೆ.ಕೆ. ಜೆ.ಕೆ.ಸಿಮೆಂಟ್ ವರ್ಕ್ಸಗೆ ಐದು ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿ ದೇಶದ ಎಕೈಕ ಸಿಮೆಂಟ್ ಸ್ಥಾರವರವಾಗಿದೆ. ಅತ್ಯುತ್ತಮ ಇಂಧನ ದಕ್ಷತೆಯ ಘಟಕ ಪ್ರಶಸ್ತಿ, ಇಂಧನ ದಕ್ಷತೆಯಲ್ಲಿ ರಾಷ್ಟ್ರೀಯ ನಾಯಕ ಪ್ರಶಸ್ತಿ (ಈ ಪ್ರಶಸ್ತಿಯನ್ನು ಸತತ ಮೂರು ವರ್ಷ ಪಡೆದುಕೊಂಡಿದೆ), ನವೀನ ಯೋಜನೆ ಪ್ರಶಸ್ತಿ (ಖನಿಜಕಾರಕವಾಗಿ ಕಿಲ್ ಫೈರಿಂಗ್ ದಲ್ಲಿ ಎಂಜಿಒ ಸುಣ್ಣದ ಕಲ್ಲು ಸೇರ್ಪಡೆ), ಇಂಧನ ದಕ್ಷ ಘಟಕ ಪ್ರಶಸ್ತಿ (ಸಿಪಿಸಿ) ಹಾಗೂ ಇಂಧನ ದಕ್ಷತೆಯಲ್ಲಿ ಯುವ ಹಾಗೂ ಉದಯೋನ್ಮುಖ ಪ್ರಶಸ್ತಿಗೆ ರಾಜಕುಮಾರನ್ ಕಂಡಸ್ವಾಮಿ ಪಡೆದುಕೊಂಡಿದ್ದಾರೆ. ಘಟಕದ ಎಲ್ಲರ ಸಹಕಾರ ವಿಶೇಷ ಪ್ರಯತ್ನದ ಲವಾಗಿ ಜೆ.ಕೆ.ಸಿಮೆಂಟ್ ಪ್ರಶಸ್ತಿಗಳಿಸಿದೆ ಎಂದು ಸಂಸ್ಥೆಯ ಮುಖ್ಯಸ್ಥ ಆರ್.ಬಿ.ಎಂ. ತ್ರೀಪಾಠಿ ಅಭಿನಂದನೆ ಸಲ್ಲಿಸಿದ್ದಾರೆ.
EndFragment