

ಬಾಗಲಕೋಟೆ: ಪ್ರತಿಯೊಬ್ಬರೂ ಮಾನವೀಯ ಸಂಬಂಧಗಳ ಮೂಲಕ ಸಮಾಜಕ್ಕೆ ಪಿಡುಗಾಗಿರುವ ಅಸ್ಪಷ್ಯತೆ ನಿರ್ಣಾಮ ಮಾಡಬೇಕು ಎಂದು ಮುಧೋಳ ತಾಲೂಕು ನಾಗರಾಳ ಗ್ರಾ.ಪಂ. ಅಧ್ಯಕ್ಷ ಯಶವಂತ ಕಾಂತಪ್ಪ ಚವ್ಹಾಣ ಹೇಳಿದರು.
ಜಿಲ್ಲೆಯ ಮುಧೋಳ ತಾಲೂಕಿನ ನಾಗರಾಳ ಗ್ರಾಮದಲ್ಲಿ ಜಿ.ಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿಜಯಪುರದ ಭಾರತಿ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಅಸ್ಪಷ್ಯತೆ ನಿವಾರಣೆ ಕುರಿತ ಬೀದಿ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ, ವಿಶ್ವಗುರು ಬಸವಣ್ಣವರು, ಮಹಾತ್ಮ ಗಾಂಧಿಯಂತಹ ಮಹಾನ್ ನಾಯಕರು ಕಂಡ ಸಮ ಸಮಾಜದ ಕಲ್ಪನೆ ಸಾಕಾರಗೊಳ್ಳಲು ಮಾನವೀಯತೆ ಮುಖ್ಯ. ಇಂದಿಗೂ ಅಸ್ಪಷ್ಯತೆ ಆಚರಣೆ ನಡೆಯುತ್ತಿರುವುದು ಮಾನವೀಯ ನೆಲೆಯಲ್ಲಿರುವ ನಾವೆಲ್ಲ ತಲೆ ತಗ್ಗಿಸುವಂತಹದ್ದು ಎಂದು ವಿಷಾಧ ವ್ಯಕ್ತಪಡಿಸಿದರು.
ಭಾರತ ದೇಶವು ತನ್ನದೆಯಾದ ಪ್ರಾಚೀನ ಕಾಲದ ಇತಿಹಾಸ ಹೊಂದಿದೆ. ಸಮಾಜದಲ್ಲಿನ ಜಾತಿ ಪದ್ಧತಿ, ಶೋಷಣೆಯಂತಹ ಅಸ್ಪಷ್ಯತೆ ಹೋಗಲಾಡಿಸಲು ಹಲವಾರು ಮಹಾನ್ ನಾಯಕರು ಶ್ರಮಿಸಿದ್ದಾರೆ. ಇಂದಿನ 21ನೇ ಶತಮಾನದಲ್ಲೂ ಇಂತಹ ಅಸ್ಪಷ್ಯತೆ ಆಚರಣೆ ಸಲ್ಲ. ಈ ಭೂತವನ್ನು ಅಳಿಸಲು ನಾಗರಿಕ ಸಮಾಜದ ಮನಸ್ಥಿತಿ ಮತ್ತು ದೃಷ್ಟಿಕೋನ ಬದಲಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಪಿಡಿಒ ಬಿ.ಡಿ. ಮಾರಾಪುರೆ, ಕಾರ್ಯದರ್ಶಿ ಎ್.ಎ. ಮಿರಗೋಳ, ಗ್ರಾ.ಪಂ. ಸದಸ್ಯರಾದ ವಿಠ್ಠಲಗೌಡ ನ್ಯಾಮಗೌಡ, ಸಿದ್ದಪ್ಪ ಜೈನಾಪುರ, ಎಚ್.ಬಿ. ಪಾಟೀಲ ಉಪಸ್ಥಿತರಿದ್ದರು.
ವಜ್ಜರಮಟ್ಟಿ ಜಾಗೃತಿ :
ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಅಸ್ಪಷ್ಯತೆ ಕುರಿತ ಜನ ಜಾಗೃತಿ ಕಾರ್ಯಕ್ರಮ ವಜ್ಜರಮಟ್ಟಿ ಗ್ರಾಮದಲ್ಲಿ ಜರುಗಿತು. ಗ್ರಾ.ಪಂ. ಅಧ್ಯಕ್ಷ ಬಸವರಾಜ ಹಂಚಿನಾಳ, ಉಪಾಧ್ಯಕ್ಷ ಲಕ್ಷ್ಮಣ ದ್ಯಾವಣ್ಣವರ, ಪಿಡಿಒ ಆರ್.ಜಿ. ತಳವಾರ, ಗ್ರಾ.ಪಂ. ಸದಸ್ಯರಾದ ಆರ್.ಟಿ. ಭಟಕುರ್ಕಿ, ರುದ್ರಪ್ಪ ಕುರಿ,ಶಂಕರ ಶಿವಣ್ಣನವರ, ವಾರ್ಡನ್ ಕೆ.ಎನ್. ಮಾಗನೂರ ಇದ್ದರು. ಇನ್ನು ಮಾಚಕನೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬೀದಿ ನಾಟಕ ಪ್ರದರ್ಶನವನ್ನು ಗ್ರಾ.ಪಂ. ಅಧ್ಯಕ್ಷ ಜಿ.ಬಿ. ನಾವಲಗಿ ಉದ್ಘಾಟಿಸಿದರು. ಗ್ರಾ.ಪಂ. ಸದಸ್ಯ ಆರ್.ಎಸ್. ಮಾಳಿ, ಎಂ.ಬಿ. ಸೊಲಗಿ, ವೈ.ಜಾನೋಜಿ ಪಾಲ್ಗೊಂಡಿದ್ದರು.
EndFragment