ಸ್ಲಂ ಪ್ರದೇಶಗಳಿಗೆ ಮೂಲಸೌಕರ್ಯ ಕಲ್ಪಿಸಿ

BKT 5-2
Published on

ಬಾಗಲಕೋಟೆ: ನವನಗರದ ಸ್ಲಂ ಪ್ರದೇಶಗಳಾದ ಆಶ್ರಯ ಕಾಲನಿ, ವಾಂಬೆ ಕಾಲನಿ, ಹುಡ್ಕೋ ಕಾಲನಿಗಳಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಶಾಸಕ ಡಾ.ವೀರಣ್ಣ ಚರಂತಿಮಠ ಶನಿವಾರ ಸ್ಥಳ ಪರಿಶೀಲನೆ ನಡೆಸಿದರು.

ಸಾರ್ವಜನಿಕರಿಗೆ ಮೂಲ ಸೌಕರ್ಯಗಳಾದ ಚರಂಡಿ, ಒಳಚರಂಡಿ, ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿ ನವನಗರವನ್ನು ಒಂದು ಮಾದರಿಯ ಸ್ಥಳವಾಗಿ ಪರಿವರ್ತನೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸ್ಲಂ ವಾಸಿಗಳ ಮನೆಗಳ ಸ್ವಚ್ಛತೆ ಮತ್ತು ಒತ್ತುವರಿ ಮಾಡದಂತೆ ದಿನಾಲು ನಿಗಾವಹಿಸಲು ನಗರಸಭೆ ಆಯುಕ್ತ ಮುನಿಶ್ಯಾಮಪ್ಪ ಅವರಿಗೆ ಸೂಚಿಸಿದರು. ಎಇ ರಾಜು ಚವ್ಹಾಣ್, ಬಿಟಿಡಿಎ ಆರ್.ಒ. ಗಣಪತಿ ಪಾಟೀಲ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ಸದಸ್ಯರಾದ ಯಲ್ಲಪ್ಪ ನಾರಾಯಣಿ, ಅಂಬಾಜಿ ಜೋಶಿ, ಪೀರಸಾಬ ನದಾಫ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net