ಅಕ್ರಮ ಮದ್ಯ ಮಾರಾಟ ನಿಷೇಧಿಸಿ

BKT 27-2
Published on

ಬಾಗಲಕೋಟೆ: ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧಿಸಬೇಕು ಎಂದು ಆಗ್ರಹಿಸಿ ಮದ್ಯ ನಿಷೇಧ ಆಂದೋಲನ ಸಂಘಟನೆ ನೇತೃತ್ವದಲ್ಲಿ ಮಹಿಳೆಯರು ನಗರದ ಜಿಲ್ಲಾಡಳಿತ ಭವನದ ಎದರು ಬುಧವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಮಹಿಳೆಯರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಸಂಘಟನೆ ಮುಖಂಡ ಶಂಕರ ಹೂಗಾರ ಮಾತನಾಡಿ, ರಾಜ್ಯದಲ್ಲಿ ಮದ್ಯದಿಂದ ಪ್ರತಿನಿತ್ಯ ನೂರಾರು ಕುಟುಂಬಗಳು ಬೀದಿಗೆ ಬೀಳುತ್ತಿವೆ. ಅನೇಕ ಸಂಸಾರಗಳಲ್ಲಿ ಜಗಳ, ಗಲಾಟೆಯಲ್ಲಿ ಕಾಲ ಕಳೆಯುವಂತಾಗಿದೆ. ಹೈಕೋರ್ಟ್ ತಕ್ಷಣವೇ ಅಕ್ರಮ ಮದ್ಯ ಮಾರಾಟ ನಿಷೇಧಿಸಬೇಕು ಎಂದು ಆದೇಶ ನೀಡಿದೆ. ಆದರೂ ಇದುವರೆಗೂ ಅಕ್ರಮ ಮದ್ಯ ಮಾರಾಟ ನಿಂತಿಲ್ಲ. ಇದರ ಹಿಂದೆ ಸರ್ಕಾರ, ಅಧಿಕಾರಿಗಳ ಕೈವಾಡವಿದೆ ಎಂದು ದೂರಿದರು.

ರೇಣುಕಾ ದೊಡ್ಡಮನಿ, ಎಂ.ಬಿ. ಗೋನಾಳ, ಎಸ್.ಬಿ. ಗೌಡರ, ಎನ್.ಎನ್. ಕಟ್ಟಿಮನಿ, ಎಸ್.ಎಂ. ಭದ್ರಶೆಟ್ಟಿ, ಮಂಜುಳಾ ಗಾಣಿಗೇರ, ಮಂಜುಳಾ ಮಾದರ, ದುರ್ಗವ್ವ ವಡ್ಡರ, ರೇಣುಕಾ ಕುರಿ ಪ್ರತಿಭಟನೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net