ಗಡಿಭಾಗದಲ್ಲಿ ಮದ್ಯ ಮಾರಾಟ ನಿಷೇಧ

liquor bar
Published on

ಬಾಗಲಕೋಟೆ: ಗಡಿಭಾಗದಲ್ಲಿ ಮದ್ಯ ಮಾರಾಟ ನಿಷೇಧ ಬೆಳಗಾವಿ ಲೋಕಸಭಾ ಉಪಾ ಚುನಾವಣೆ ಹಿನ್ನಲೆಯಲ್ಲಿ ಏ.17 ರಂದು ಮತದಾನ ನಡೆಯಲಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಏ.15 ಸಂಜೆ 6 ರಿಂದ ಏ.17ರ ಮಧ್ಯರಾತ್ರಿ 12 ಗಂಟೆ ವರೆಗೆ ಬೆಳಗಾವಿ ಲೋಕಸಭಾ ಕ್ಷೇತ್ರದ 5 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಯ ಮುಧೋಳ ತಾಲೂಕಿನ ಉತ್ತೂರು, ಜಮಖಂಡಿ ತಾಲೂಕಿನ ಕಾಲತಿಪ್ಪಿ, ತೇರದಾಳ (ಶೇಗುಣಸಿ ರಸ್ತೆ) ಮತ್ತು ತೇರದಾಳ (ಕುಡಚಿ ರಸ್ತೆ) ಗ್ರಾಮಗಳಲ್ಲಿ ಮಾತ್ರ ಬೀರ, ಬ್ರಾೃಂಡಿ ಹಾಗೂ ಲೀಕರ್ ಮಾರಾಟ, ಸಂಗ್ರಹಣೆ ಹಾಗೂ ಸಾಗಾಣಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net