ಹೋರಾಟದಲ್ಲಿ ನೈಜ ಕಾಳಜಿ ಇಲ್ಲ

BKT 25-3
Published on

ಬಾಗಲಕೋಟೆ: ಕುರುಬ ಸಮಾಜಕ್ಕೆ ಎಸ್.ಟಿ ಸೇರಿಸಬೇಕು ಎನ್ನುವ ಕುರಿತು ನಡೆಯುತ್ತಿರುವ ಹೋರಾಟದಲ್ಲಿ ಸಮಾಜದ ಹಿತಾಸಕ್ತಿಗ್ಗಿಂತ ರಾಜಕಾರಣಿಗಳ ಸ್ವಾರ್ಥ ಅಡಗಿದೆ. ಇದೊಂದು ರಾಯಣ್ಣ ಬ್ರಿಗೇಡ್ ಎರಡನೇ ಭಾಗ ಎಂದು ಜನ ಸಾಮಾನ್ಯರ ಪಕ್ಷದ ರಾಜ್ಯಾಧ್ಯಕ್ಷ ಯಲ್ಲಪ್ಪ ಹೆಗಡೆ ಹೇಳಿದರು.

ಮೀಸಲಾತಿ ಕುರಿತು ಅಧಿವೇಶನ, ಸಂಪುಟ ಸಭೆಯಲ್ಲಿ ಧ್ವನಿ ಎತ್ತದ ನಾಯಕರು ಸಾರ್ವಜನಿಕರವಾಗಿ ಹೋರಾಟಕ್ಕೆ ಮುಂದಾಗಿದ್ದಾರೆ. ಇದರಲ್ಲಿ ಕುರುಬ ಸಮಾಜ ಕಾಳಜಿ ಇಲ್ಲ. ಬದಲಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕದಿಂದ ಸ್ಪರ್ಧಿಸಿ ತಮ್ಮ ರಾಜಕಾರಣದ ಬೆಳೆ ಬೇಯಿಸಿಕೊಳ್ಳಲು ಸಮಾಜವನ್ನು ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಯಾವುದೇ ಸಮಾಜವೇಶ, ಸಮಾಜದ ಹೋರಾಟಗಳು ಬಾಗಲಕೋಟೆಯಿಂದಲೇ ನಡೆಯುತ್ತದೆ. ಮುಖ್ಯವಾಗಿ ಬಿಜೆಪಿ ನಾಯಕರು ಇಂತಹ ಕಾರ್ಯಕ್ರಮ ನಡೆಸಿ ಬಸವಣ್ಣವರ ತತ್ವಗಳನ್ನು ಕೊಲೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಕೆ.ಎಸ್.ಈಶ್ವರಪ್ಪ ಸೇರಿದಂತೆ ಎಲ್ಲ ನಾಯಕರು ತಮ್ಮ ಮಕ್ಕಳನ್ನು ಬೆಳೆಸಲು ಈ ತಂತ್ರಗಾರಿಕೆ ಮಾಡುತ್ತಿದ್ದಾರೆ. ಹೋರಾಟ ಸಮಿತಿಯಲ್ಲಿ ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಅವಕಾಶ ನೀಡಿಲ್ಲ. ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕ ಭಾಗದ ನಾಯಕರೇ ಹೋರಾಟದಲ್ಲಿ ಮಿಂಚುತ್ತಿದ್ದಾರೆ. ಈ ಭಾಗದ ಜನ ಮುಗ್ಧರು. ಅದರ ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಬುಡಕಟ್ಟು ಜನಾಂಗಕ್ಕೆ ಎಸ್.ಟಿ ವರ್ಗ ಸೌಲಭ್ಯ ದೊರೆಯಬೇಕು ಎಂಬುದು ಸಂವಿಧಾನದಲ್ಲಿದೆ. ಕುರುಬ ಸಮಾಜ ಕೂಡ ಬುಡಕಟ್ಟು ಸಮಾಜದಡಿ ಬರುತ್ತದೆ. ಹಿಂದೆ ವಾಲ್ಮೀಕಿ ಸಮಾಜವನ್ನು ಎಸ್.ಟಿ ವರ್ಗಕ್ಕೆ ಸೇರಿಸುವಾಗ ಕುರುಬ ಸಮಾಜಕ್ಕೆ ಮೀಸಲಾತಿ ನೀಡುವ ಬಗ್ಗೆ ಚರ್ಚಿಸಲಾಗಿತ್ತು. ಆದರೇ ಸಮಾಜದ ನಾಯಕರು ಹಿಂದೇಟು ಹಾಕಿದರು. ಇದೀಗ ಹೋರಾಟದ ಹೆಸರಿನಲ್ಲಿ ನಾಟಕವಾಡುತ್ತಿದ್ದಾರೆ. ಮೀಸಲಾತಿ ಬಗ್ಗೆ ನಿಜವಾಸ ಕಾಳಜಿ ಇದ್ದರೇ ಸದನಲ್ಲಿ ಹೋರಾಟ ನಡೆಸಲಿ ಎಂದು ಆಗ್ರಹಿಸಿದರು.

ಜನ ಸಾಮಾನ್ಯರ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ತುಕಾರಾಮ ಮ್ಯಾಗಿನಮನಿ, ಮುಖಂಡರಾದ ತಿಪ್ಪಣ್ಣ ಯಡಹಳ್ಳಿ, ಶ್ರೀಕಾಂತ ಚಿನವಾಲ, ಕೃಷ್ಣಾ ಮುಧೋಳ ಸೇರಿದಂತೆ ಇತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net