ಡಿ.23 ರಂದು ರಾಜ್ಯಾದ್ಯಂತ ರಕ್ತದಾನ ಶಿಬಿರ

BKT 21-1
Published on

ಬಾಗಲಕೋಟೆ: ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರುಗಳ ಜನ್ಮದಿನೋತ್ಸವ ಹಾಗೂ ರೈತ ದಿನಾಚರಣೆ ನಿಮಿತ್ತ ಡಿ.23 ರಂದು ರಾಜ್ಯಾದ್ಯಂತ ರಕ್ತ ದಾಸೋಹ (ರಕ್ತದಾನ ಶಿಬಿರ) ಪಂಚಮಸಾಲಿ ಸಮಾಜದ ಯುವ ಘಟಕದಿಂದ ಹಮ್ಮಿಕೊಳ್ಳಲಾಗಿದೆ ಎಂದು ಘಟಕದ ಜಿಲ್ಲಾಧ್ಯಕ್ಷ ಡಾ.ಶಿವಕುಮಾರ ಗಂಗಲ್ ಹೇಳಿದರು.

ಅಂದು ರಾಜ್ಯದ ಪ್ರತಿ ಜಿಲ್ಲಾ, ತಾಲೂಕಾ ಕೇಂದ್ರಗಳಲ್ಲಿ ಆಸ್ಪತ್ರೆಗಳಲ್ಲಿ ರಕ್ತದಾನ ಶಿಬಿರಗಳು ನಡೆಯಲಿದೆ. ಕೊಡುತ್ತೇವೆ ರಕ್ತವನ್ನು ಪಡೆಯುತ್ತೇವೆ ಮೀಸಲಾತಿಯನ್ನು ಧ್ಯೇಯದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯುವ ಸಮೂಹ ರಕ್ತದಾನ ಮಾಡುವ ಮೂಲಕ ಮೀಸಲಾತಿ ಹೋರಾಟವನ್ನು ಬೆಂಬಲಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಪಂಚಮಸಾಲಿ ಸಮಾಜದ ಬಾಗಲಕೋಟೆ ತಾಲೂಕಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪುರತಗೇರಿ ಮಾತನಾಡಿ, ಡಿ.23 ರಂದು ಬಾಗಲಕೋಟೆಯಲ್ಲಿ ಎಂ.ಪಿ. ನಾಡಗೌಡ ಬಡಾವಣೆಯ ಗುರುನೂರು ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದ್ದು, ಈಗಾಗಲೇ 20 ಜನ ರಕ್ತದಾನಕ್ಕೆ ಮುಂದಾಗಿದ್ದಾರೆ. ಗರಿಷ್ಠ 50 ಜನ ಮಾಡಬೇಕೆಂಬ ಗುರಿ ಇದೆ ಎಂದ ಅವರು ಜ. 14 ರಿಂದ ಕೂಡಲಸಂಗಮದಿಂದ ಪ್ರಾರಂಭವಾಗುವ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಪಾಲ್ಗೊಳ್ಳಬೇಕು ಎಂದು ತಿಳಿಸಿದರು. ಮುಖಂಡರಾದ ಶಿವಾನಂದ ಯಾಳಗಿ, ಸಂಗಮೇಶ ದೊಡಮನಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net