

ಬಾಗಲಕೋಟೆ: ನಗರದ ಪ್ರತಿಷ್ಠಿತ ಕೆರೂಡಿ ಸಂಶೋಧನಾ ಕೇಂದ್ರದ ಹೃದಯ ರೋಗ ಆಸ್ಪತ್ರೆ ಹೃದಯ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿದೆ ಎಂದು ಕೇಂದ್ರದ ಮುಖ್ಯಸ್ಥ ಡಾ.ಬಿ.ಎಚ್.ಕೆರೂಡಿ ಹೇಳಿದರು.
ಈ ಹಿಂದೆ ಹೃದಯ ರೋಗಿಗಳು ಚಿಕಿತ್ಸೆಗಾಗಿ ಬೆಳಗಾವಿ, ಹುಬ್ಬಳ್ಳಿ ಹಾಗೂ ಬೆಂಗಳೂರಿಗೆ ಅಲೆದಾಡಬೇಕಿತ್ತು. ಇದೀಗ ನಮ್ಮ ಆಸ್ಪತ್ರೆ ಆರಂಭವಾದಾಗಿನಿಂದ ಕೊಪ್ಪಳ, ವಿಜಯಪುರ, ರಾಯಚೂರು, ಗದಗ ಸೇರಿ ಬಾಗಲಕೋಟೆ ಜಿಲ್ಲೆಯ ಹೃದಯ ರೋಗಿಗಳಿಗೆ ವರದಾನವಾಗಿದೆ. ಅತ್ಯಾಧುನಿಕ ಸೌಲಭ್ಯ ಒದಗಿಸಲಾಗಿದೆ. ನುರಿತು ವೈದ್ಯರ ತಂಡ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಸ್ಪತ್ರೆ ಹೃದಯ ರೋಗ ತಜ್ಞ ರವಿ ಸೊಲಬ್ಬನವರ ಮಾತನಾಡಿ, ಕಠಿಣವಾದ ಹೃದಯ ರೋಗ ಸಮಸ್ಯೆ ಹೊತ್ತು ಬರುವ ರೋಗಿಗಳು ಇಲ್ಲಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಸರ್ಕಾರದ ಯೋಜನೆಗಳಿಂದ ರೋಗಿಗಳಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮಹಾನಗರಗಳಿಗೆ ಹೃದಯ ಸಂಬಂಧಿ ರೋಗಗಳ ಚಿಕಿತ್ಸೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚಾಗುತ್ತದೆ. ನಮ್ಮಲ್ಲಿ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ಡಾ.ಸೋಮಶೇಖರ ಕೆರೂಡಿ, ಡಾ.ಕ್ಷಮತಾ ಕೆರೂಡಿ, ಡಾ.ಸಂತೋಷ ಹುಕ್ಕೇರಿ ಇತರರು ಇದ್ದರು.
ಹೃದಯ ಬೇನೆ ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದೆ. ಈಸಿಜಿ, ಏಕೋಕಾರ್ಡಿಯೋಗ್ರಾಮ್ ತಪಾಸಣೆ ಮಾಡಿದಾಗ ಪೆಟೆಂಟ್ ಡಕ್ಟಸ್ ಆರ್ಟಿಟಿಯೋಸಿಸ್ ಎನ್ನುವ ಕಾಯಿಲೆ ಇರುವ ಬಗ್ಗೆ ವೈದ್ಯರು ತಿಳಿಸಿದರು. ಯಾವುದೇ ಶಸ್ತ್ರ ಚಿಕಿತ್ಸೆ ಮಾಡದೆ ಆಧುನಿಕ ಯಂತ್ರಗಳ ಮೂಲಕ ಕೆರೂಡಿ ಹೃದಯ ಆಸ್ಪತ್ರೆ ವೈದ್ಯರು ಪಿಡಿಎ ಡಿವೈಎಸ್ ಕ್ಲೋಜರ್ ಚಿಕಿತ್ಸೆ ನೀಡಿದರು. 6 ದಿನದಲ್ಲಿ ಸಂಪೂರ್ಣವಾಗಿ ಗುಣಮುಖವಾಗಿದ್ದೇನೆ. ದೇಹಕ್ಕೆ ಯಾವುದೇ ಗಾಯವಾಗಿಲ್ಲ.
- ಪೂಜಾರ ಅರಹುಣಸಿ 19 ವರ್ಷದ ರೋಗಿ, ಬಾದಾಮಿ ತಾಲೂಕು ಬನಶಂಕರಿ ಗ್ರಾಮ
ರೋಗಿಗಳ ಆರೈಕೆಗೂ ಆದ್ಯತೆ
ಉತ್ತಮ ವೈದ್ಯರ ತಂಡ ನಮ್ಮ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದೆ. ಕಳೆದ 5 ವರ್ಷದಲ್ಲಿ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಆಂಜಿಯೋಪ್ಲಾೃಸ್ಟಿಗಳನ್ನು, ಬೈಪಾರ್ಸ್ ಸರ್ಜರಿ, ಕವಾಟದ ಬದಲಿ, ಹೃದಯ ರಂದ್ರ ಮುಚ್ಚುವಿಕೆ ಸೇರಿ ಹೃದಯಕ್ಕೆ ಸಂಬಂಧಪಟ್ಟ ಎಲ್ಲ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಚಿಕಿತ್ಸೆ ಬಳಿಕ ರೋಗಿಗಳ ಆರೈಕೆಯಲ್ಲಿಯೂ ಜಾಗ್ರತೆ ವಹಿಸಲಾಗುತ್ತದೆ.
EndFragment