ಶುದ್ಧೀಕರಣ ನೀರು ಶೀಘ್ರ ಪೂರೈಕೆ

BKT 7-3
Published on

ಬಾಗಲಕೊಟೆ: ನಗರದ ವಿನಾಯಕ ಬಡಾವಣೆಯ ನಾಡಗೌಡ ಪಾರ್ಕ್‌ನಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ವತಿಯಿಂದ ನಿರ್ಮಾಣವಾಗಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕಕ್ಕೆ ಶಾಸಕ ವೀರಣ್ಣ ಚರಂತಿಮಠ ಮಂಗಳವಾರ ಭೇಟಿ ನೀಡಿದರು.

ನಗರದ ಕ್ವಾರಿಯಿಂದ ನಾಡಗೌಡ ಪಾರ್ಕ್‌ದಲ್ಲಿರುವ ಶುದ್ಧೀಕರಣ ಘಟಕಕ್ಕೆ ನೀರು ಪೂರೈಕೆಯಾಗುತ್ತಿದ್ದು, ಬಹುದಿನಗಳಿಂದ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ಎಲ್ಲ ಸಮಸ್ಯೆಗಳು ಪರಿಹರಿಸಲಾಗಿದ್ದು, ಶೀಘ್ರದಲ್ಲೇ ನಗರದ ಜನತೆಗೆ ನೀರು ಸಿಗಲಿದೆ ಎಂದು ತಿಳಿಸಿದರು.
ಪ್ರಾಯೋಗಿಕವಾಗಿ ಶುದ್ಧೀಕರಣ ನೀರು ಪೂರೈಕೆ ಘಟಕದಲ್ಲಿ ಕೆಲಸ ನಡೆದಿದ್ದು ಇದನ್ನು ಪರಿಶೀಲಿಸಲಾಗಿದೆ. ಎಲ್ಲ ಕೆಲಸಗಳು ಪೂರ್ಣಗೊಂಡಿದೆ. ಶುದ್ಧ ನೀರು ನಗರ ವಾಸಿಗಳಿಗೆ ಸಿಗಲಿದೆ ಎಂದು ಹೇಳಿದರು. ಮಂಡಳಿ ಕಾರ್ಯನಿರ್ವಾಹಕ ಅಭಿಯಂತರ ಗುರುರಾಜ್ ಬಂಗಿಣ್ಣವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net